ಬುರೈದ(www.vknews.in): ಇಂಡಿಯನ್ ಸೋಶಿಯಲ್ ಫೋರಮ್ ವತಿಯಿಂದ ಸೋಶಿಯಲ್ ಫೋರಮ್ ಹೊನಲು ಬೆಳಕಿನ ಅಂಡರ್ ಆರ್ಮ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ದಿನಾಂಕ 27-05-2022 ರಂದು ಅಲ್ ಖುದ್ಯರಾ ಸ್ಟೇಡಿಯಂನಲ್ಲಿ ಆಯೋಜಿಸಲಾಯಿತು. ಪಂದ್ಯಾಟದ ಉದ್ಘಾಟನೆಯ ಭಾಗವಾಗಿ ಇಂಡಿಯನ್ ಸೋಶಿಯಲ್ ಫೋರಮ್ ಬುರೈದ ಇದರ ಅಧ್ಯಕ್ಷರಾದ ರಶೀದ್ ಉಚ್ಚಿಲ ಹಾಗೂ ಉದ್ಯಮಿ ಸಾದಿಕ್ ಕಾಟಿಪಳ್ಳರವರು ಕ್ರಿಕೆಟ್ ಆಡುವ ಮುಖಾಂತರ ಪಂದ್ಯಾಟಕ್ಕೆ ಚಾಲನೆಯನ್ನು ನೀಡಿದರು. ಈ ಕ್ರೀಡಾಕೂಟದಲ್ಲಿ ವಿವಿಧ ಪ್ರದೇಶಗಳಿಂದ ಹಲವಾರು ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಹರ್ಬಿ ಕ್ರಿಕೆಟರ್ಸ್ ಮತ್ತು ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಫೋರೆವರ್ ತಮ್ಮದಾಗಿಸಿಕೊಂಡರು. ಈ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಇಂಡಿಯನ್ ಫ್ರಟೆರ್ನಿಟಿ ಫೋರಮ್ ಅಧ್ಯಕ್ಷ ಅಯಾಜ್ ಕಾಟಿಪಳ್ಳ ಮಲ್ಲೂರ್ ಜಿ ಜಿ ಸಿ ಸಿ ಕಮಿಟಿ ಸದಸ್ಯ ಸಿದ್ದಿಕ್ ಮಲ್ಲೂರ್ ,ಯುವ ಉದ್ಯಮಿ ರಫೀಕ್ ನಜಮ್ ,ಅಡ್ಡೂರ್ ಕಮಿಟಿ ಅಧ್ಯಕ್ಷ ರಝಕ್ ಅಡ್ಡೂರ್ ಮತ್ತು ಯುವ ಉದ್ಯಮಿ ಶಾಫಿ ಪೆರುವಾಯಿ ಆಗಮಿಸಿದ್ದರು. ತಾಜ್ ಹೋಟೆಲ್ ಬುರೈದ ಪ್ರಾಯೋಜಕತ್ವದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಸೋಶಿಯಲ್ ಫೋರಮ್ ಕಾರ್ಯಕರ್ತರಾದ ಝಕರಿಯ ಕೊರಂಗೀಲ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.