ದೋಹ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ದೋಹಾ ಝೋನ್, ಅಲ್ ಸದ್ಧ್ ಸೆಕ್ಟರ್ ಉದರ ವಾರ್ಷಿಕ ಮಹಾಸಭೆಯು ದಿನಾಂಕ 31-05-2022 ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ 8:30 ಗಂಟೆಗೆ ನಿಯಾಝ್ ಕೂರ್ನಾಡ್ ಇವರ ಅಧ್ಯಕ್ಷತೆಯಲ್ಲಿ ಅಲ್ ಬಿಧಾ ಪಾರ್ಕಿನಲ್ಲಿ ನಡೆಯಿತು.
ಝೋನ್ ಎಡ್ಮಿನ್ ವಿಂಗ್ ಕಾರ್ಯದರ್ಶಿ ಹಸೈನಾರ್ ಕಾಟಿಪ್ಪಳ್ಳ ದುಆ ನೆರೆವೇರಿಸಿ,ಸಭೆಗೆ ಒಂದುಗೂಡಿದ ಎಲ್ಲರನ್ನೂ ಸೆಕ್ಟರ್ ಕಾರ್ಯದರ್ಷಿ ನೌಷಾದ್ ಎಲಿಮಲೆ ಸ್ವಾಗತಿಸಿದರು , ಕತ್ತರ್ ನ್ಯಾಷನಲ್ ಸಮಿತಿ ಎಡ್ಮಿನ್ ವಿಂಗ್ ಅಧ್ಯಕ್ಷ ಫಾರೂಕ್ ಕೃಷ್ಣಾಪುರ ಕೆಸಿಎಫ್ ಕಾರ್ಯಕರ್ತರು ಹೇಗಿರಬೇಕು, ಅವರ ಕಾರ್ಯಾಚರಣೆ ಯಾವ ರೀತಿಯಲ್ಲಾಗಿರಬೇಕು ಎಂಬುದರ ಬಗ್ಗೆ ಬಹಳ ಸವಿಸ್ತಾರವಾಗಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಾಸ್ಥಾವಿಕ ಭಾಷನಗೈದರು.
ಚುಣಾವಣಾ ವೀಕ್ಷಕರಾಗಿ ಕಲೀಲ್ ಉರುಮಣೆ ಹಾಗೂ ಝುಬೈರ್ ತುರ್ಕಲಿಕೆ ಆಗಮಿಸಿದ್ದರು. ನಂತರ ಸದ್ರಿ ಸಮಿತಿಯನ್ನು ವಿಸರ್ಜಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಸಾಲಿನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಕೆ.ಸಿ.ರೋಡ್, ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ಎಲಿಮಲೆ, ಕೋಶಾಧಿಕಾರಿಯಾಗಿ ಅಲಿ ಕನ್ಯಾನ, ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಕಲ್ಪಾದ, ಶಿಕ್ಷಣ ವಿಭಾಗ ಕಾರ್ಯದರ್ಶಿಯಾಗಿ ಹಮೀದ್ ಸುರಲ್ಪಾಡಿ, ಇಹ್ಸಾನ್ ವಿಭಾಗ ಕಾರ್ಯದರ್ಶಿಯಾಗಿ ಕಲೀಲ್ ಕನ್ಯಾನ ಇವರುಗಳನ್ನು ಹಾಗೂ ಸದಸ್ಯರುಗಳನ್ನು ಆರಿಸಲಾಯಿತು.
ದೋಹ ಝೋನ್ ಸಂಘಟನಾ ಕಾರ್ಯದರ್ಶಿ ಫಾರೂಕ್ ಜೆಪ್ಪು ಸಭೆ ನಿಯಂತ್ರಿಸಿದರು. ನೂತನ ಪ್ರ. ಕಾರ್ಯದರ್ಶಿ ನೌಷಾದ್ ಎಲಿಮಲೆ ವಂದಿಸಿ 3 ಸಲಾತಿನೊಂದಿಗೆ ಸಭೆ ಕೊನೆಗೊಲಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.