ದುಬೈ (www.vknews.in) : ದುಬೈಯಲ್ಲಿ ಸುಮಾರು ಇಪ್ಪತ್ತೈದು ವರ್ಷಗಳಿಂದ ಉದ್ಯೋಗ ದಲ್ಲಿದ್ದ ಮೊಹಮ್ಮದ್ ರಫೀಕ್ ಆತೂರು ಅವರು ಸಾಮಾಜಿಕ ಸೇವೆ, ಧಾರ್ಮಿಕ ವಿದ್ಯಾ ಸಂಸ್ಥೆಗಳ ಅಭಿವೃದ್ಧಿಗೆ ಸಕ್ರೀಯವಾಗಿ ತೊಡಗಿಸಿಕೊಂಡು ಮಾದರಿ ಕಾರ್ಯಕರ್ತರಾಗಿ ತನ್ನ ಉತ್ತಮ ಗುಣನಡತೆ, ಸಾಮಾಜಿಕ ಕಳಕಳಿಯೊಂದಿಗೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕೇಂದ್ರ ಸಮಿತಿ, ದಾರುನ್ನೂರು ಯುಎಇ ಸಮಿತಿ, ನೂರುಲ್ ಹುದಾ ಯುಎಇ ಸಮಿತಿ, ಶಂಸುಲ್ ಉಲೆಮಾ ಅರೆಬಿಕ್ ಕಾಲೇಜು ಯುಎಇ ಸಮಿತಿ, ದಾರುಸ್ಸಲಾಮ್ ದುಬೈ ಸಮಿತಿ ಮತ್ತು ಅಧೀನ ಸಮಿತಿ ಹಾಗೂ ಇನ್ನಿತರ ಹಲವಾರು ಸಾಮಾಜಿಕ ಜವಾಬ್ದಾರಿ ಯನ್ನು ಸಕ್ರೀಯವಾಗಿ ನಿರ್ವಹಿಸಿ ಇತ್ತೀಚೆಗೆ ಅನಾರೋಗ್ಯ ದಿಂದ ತಾಯಿನಾಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಮಂಗಳೂರು ಆಸ್ಪತ್ರೆಯಲ್ಲಿ ಜೂನ್ ಒಂದು ಬದವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಸುಮಾರು 48 ವರ್ಷ ವಯಸ್ಸಾಗಿತ್ತು. ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು, ಮೊಮ್ಮಕ್ಕಳನ್ನು ಮತ್ತು ಅಪಾರ ಬಂದು ಮಿತ್ರಾದಿಗಳನ್ನು ಅಗಲಿದ್ದಾರೆ.
ಮೊಹಮ್ಮದ್ ರಫೀಕ್ ಆತೂರು ಅವರ ವಿಯೋಗಕ್ಕೆ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಸಮಿತಿ ಅಧ್ಯಕ್ಷರಾದ ಸೈಯ್ಯದ್ ಆಸ್ಕರ್ ಅಲಿ ತಂಙಳ್ ಮತ್ತು ಅಧೀನ ಸಮಿತಿಗಳ ಪ್ರಮುಖರು ಅಗಾಧ ದುಃಖವನ್ನು ವ್ಯಕ್ತಪಡಿಸಿ ಸಂತಾಪವನ್ನು ಸೂಚಿಸುವುದರೊಂದಿಗೆ ಮೃತರ ಮೇಲೆ ಎಲ್ಲಾ ದೀನಿ ಸಹೃದಯರು ಮಯ್ಯಿತ್ ನಮಾಝ್ ಮತ್ತು ವಿಶೇಷ ದುಆ ಕಾರ್ಯವನ್ನು ನೆರವೇರಿಸಬೇಕೆಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.