(www.vknews.in) : ವಿಟ್ಲದಲ್ಲಿ ಇತ್ತೀಚೆಗೆ ನಿಖೇತನ ಪ್ರೇರಿತ ಸಂಘಟನೆಗಳ ಮುಖಂಡ ರಾಧಾಕೃಷ್ಣ ಮತ್ತು ಇತರರು, ಇಸ್ಲಾಮ್ ಧರ್ಮದ ಮೌಲ್ಯಗಳ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕವಾಗಿ ದ್ವೇಷ ಭಾಷಣ ಮಾಡಿ ಸ್ಥಳೀಯವಾಗಿ ಇಲ್ಲಿನ ಮುಸ್ಲಿಮರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನಾಂಗದ ಮದ್ಯೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ.
ಆರ್ಯ ಪ್ರೇರಿತ ಈ ಕೃತ್ಯ ನೂಪುರ್ ಶರ್ಮಾ ಕೃತ್ಯದ ಮುಂದಿನ ಭಾಗವಾಗಿ ನಡೆಯುತ್ತಿದೆ. ಇಸ್ಲಾಮ್ ಧರ್ಮ, ಇಸ್ಲಾಮಿನ ವಿವಿಧ ಮೌಲ್ಯಗಳನ್ನು,ವಿವಿಧ ಕಾಲಗಳ ಅವಧಿಯಲ್ಲಿ ಮಾನವ ಕೋಟಿಗೆ ಮಾರ್ಗ ದರ್ಷಕರಾಗಿ ಬಂದು, ಏಕತೆ, ಸಮಾನತೆ, ಬಾತೃತ್ವ, ವಿಮೋಚನೆ, ಕ್ರಾಂತಿ ಯೋಗ, ಏಕದೇವತ್ವ, ಜಾತಿತ್ವ, ಧಾರ್ಮಿಕತೆ ಪ್ರತಿಪಾದನೆಯ ದಾರ್ಶನಿಕ, ಸಂತರ, ಕುಲ ಗುರುಗಳನ್ನು ಅವಮಾನಿಸುವ ಅಪರಾಧ ಕೃತ್ಯವನ್ನು ವಿಟ್ಲದ ಒಂದು ನಿರ್ಧಿಷ್ಟ ಸಾರ್ವಜನಿಕ ಸಭೆಯಲ್ಲಿ ಮಾಡಲಾಗಿದೆ.
ಈ ಕೃತ್ಯದಿಂದ ಒಂದು ನಿರ್ಧಿಷ್ಟ ಜನರ ಧಾರ್ಮಿಕ ನಂಬಿಕೆಗಳನ್ನು ಅತಿಕ್ರಮಿಸಿ, ಅವಹೇಳನ ಮಾಡಲಾಗಿದೆ. ಇಂತಹುದೇ ಹೇಳಿಕೆಗಳನ್ನು ಇತ್ತೀಚೆಗೆ ಟೈಮ್ಸ್ ಟಿ.ವಿ.ಯಲ್ಲಿ ನೋಪೂರ್ ಶರ್ಮಾ ಮತ್ತು ಜಿಂದಾಲ್ ನಡೆಸಿ ಜಾಗತಿಕವಾಗಿ ಧರ್ಮ ನಿಂದನೆ ಮಾಡಿರುವ ಕೃತ್ಯ ನಡೆದಿದೆ.
ಆದುದರಿಂದ ರಾಜ್ಯ ಸರಕಾರ ವಿಟ್ಲದ ದ್ವೇಷ ಭಾಷಣದ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ದುಷ್ಕರ್ಮಿ ದ್ವೇಷ ಭಾಷಣಕಾರರನ್ನು ತಕ್ಷಣ ಬಂಧಿಸಬೇಕು. ಪೊಲೀಸು ಇಲಾಖೆ ಈ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ ಕ್ರಮ ಕೈಗೊಳ್ಳಲಿ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸು ಇಲಾಖೆ ನೇರ ಹೊಣೆಯಾಗಬೇಕಾಗುತ್ತದೆ.
ಕೆ.ಅಶ್ರಫ್ ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.