(www.vknews.in) : ಕೇರಳದ ಮಲಪ್ಪುರಂ ನಿವಾಸಿ ಶಿಹಾಬುದ್ದೀನ್ ಚೋಟೂರ್ ಎಂಬವರು ಕಾಲ್ನಡಿಗೆಯಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿದ್ದು, ಮಕ್ಕಾಕ್ಕೆ ತೆರಳುವ ಹಾದಿಯಲ್ಲಿ ಕಾಸರಗೋಡಿನಲ್ಲಿ ಸುಳ್ಯದ ಪ್ರಮುಖರ ತಂಡ ಭೇಟಿಯಾಗಿ ಶುಭ ಹಾರೈಸಿದರು. ಸುಮಾರು 8640 ಕಿ ಮೀ ಕ್ರಮಿಸಿ 280ದಿನಗಳಲ್ಲಿ ಅಂದರೆ ಮುಂದಿನ ವರ್ಷದ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ಶಿಹಾಬುದ್ದೀನ್ ರವರು 6 ರಾಷ್ಟ್ರಗಳ ಮೂಲಕ ಕಾಲ್ನಡಿಗೆಯಲ್ಲಿ ಸೌದಿ ಅರೇಬಿಯಾದ ಮಕ್ಕಾಕ್ಕೆ ತಲುಪಲಿದ್ದಾರೆ.
ಈ ಸಂದರ್ಭದಲ್ಲಿ ದ. ಕ ಜಿಲ್ಲಾ ವಕ್ಫ್ ನಿಕಟಪೂರ್ವ ಸದಸ್ಯ ಕೆ ಎಂ ಮುಸ್ತಫಾ ಸುಳ್ಯ, ಸುನ್ನಿ ಮಹಲ್ ಪೇಡೆರೇಶನ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತಾರ್ ಮಂಡೆಕೋಲು, ಸುಳ್ಯ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಐ ಕೆ ಮಹಮ್ಮದ್ ಇಕ್ಫಾಲ್ ಎಲಿಮಲೆ, ಸ್ವರ್ಣೋಧ್ಯಮಿ ಹಾಜಿ ಅಬ್ದುಲ್ ರಜಾಕ್ ರಾಜಧಾನಿ ಇವರುಗಳು ಉಪಸ್ಥಿತರಿದ್ದು ಪ್ರಯಾಣಕ್ಕೆ ಶುಭ ಹಾರೈಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.