ಈತ ತಂದೆಯ ಬಂದೂಕಿನಿಂದ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ..
ಲಕ್ನೋ (ವಿಶ್ವ ಕನ್ನಡಿಗ ನ್ಯೂಸ್) : ಬಾಲಕನೊಬ್ಬ ಪಬ್ಜಿ ವಿಡಿಯೋ ಗೇಮ್ ಆಡದಂತೆ ತಡೆದ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಅಪ್ರಾಪ್ತ ಮಗ ತನ್ನ ತಂದೆಯ ಬಂದೂಕಿನಿಂದ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ.
ಬಾಲಕ ಪಬ್ಜಿ ಆಟಕ್ಕೆ ವ್ಯಸನಿಯಾಗಿದ್ದನು ಮತ್ತು ಅವನ ತಾಯಿ ಅವನನ್ನು ಆಡದಂತೆ ತಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪಬ್ಜಿ ಆಟಕ್ಕೆ ಸಂಬಂಧಿಸಿದಂತೆ ಈ ಹಿಂದೆ ಭಾರತದಲ್ಲಿ ಕೊಲೆಗಳು ನಡೆದಿವೆ. ಕಳೆದ ವರ್ಷ ಮಾರ್ಚ್ನಲ್ಲಿ, ಪಬ್ಜಿ ಗೇಮ್ ಗಾಗಿ ನಡೆದ ವಾಗ್ವಾದದಲ್ಲಿ ಥಾಣೆ ಮೂಲದ ವ್ಯಕ್ತಿಯನ್ನು ಅವನ ಮೂವರು ಸ್ನೇಹಿತರು ಕೊಲೆ ಮಾಡಿದ್ದರು. ಪಬ್ಜಿ ಗೇಮ್ ಅನ್ನು ಚೀನಾದ ಕಂಪನಿ ಟ್ಯಾನ್ಸೆಂಟ್ ಪ್ರಾರಂಭಿಸಿತು. ಇದನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.