ಕೊಚ್ಚಿ ಕೆ.ಕೆ. ಫ್ಯಾಮಿಲಿ ಸದಸ್ಯ ಡಾಕ್ಟರ್ ಇಸ್ಮಾಯಿಲ್ ಅಸ್ಸಾಂ ರವರಿಂದ ಮದ್ರಸಕ್ಕೆ ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರ ಕೊಡುಗೆ..
ಮಾಡನ್ನೂರು (www.vknews.in) : ನೂರುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ನವೀಕೃತಗೊಂಡ ಕಾರ್ಯಾಲಯವು ಇಂದು ಜುಮಾ ನಮಾಜ್ ಬಳಿಕ ಮಸೀದಿ ಖತೀಬರಾದ ಬಹು ಸಿರಾಜುದ್ದೀನ್ ಫೈಝಿ ಯವರಿಂದ ಉದ್ಘಾಟನೆಗೊಂಡಿತು. ಸರಳವಾಗಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಕೆ.ಕೆ. ಇಬ್ರಾಹಿಂ ಹಾಜಿಯವರು ವಹಿಸಿದ್ದರು. ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಇದರ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ರವರು ಕಛೇರಿಯಲ್ಲಿ ಹೊಸತಾಗಿ ವ್ಯವಸ್ಥೆ ಗೊಳಿಸಿದ ಕಂಪ್ಯೂಟರ್ ಗೆ ಚಾಲನೆ ನೀಡಿದರು.
ಕೆ.ಕೆ.ಕೊಚ್ಚಿ ಮನೆತನದ ಸದಸ್ಯ ಪ್ರಸ್ತುತ ಅಸ್ಸಾಂ ನಲ್ಲಿ ನೆಲೆಸಿರುವ ಬಹು ಡಾಕ್ಟರ್ ಇಸ್ಮಾಯಿಲ್ ರವರು ಮದ್ರಸಕ್ಕೆ ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರವನ್ನು ಕೊಡುಗೆಯಾಗಿ ನೀಡಿದರು.ಅದೇ ರೀತಿ ಕಛೇರಿಗೆ ಅಗತ್ಯವಿರುವ ಕಂಪ್ಯೂಟರ್ ಟೇಬಲ್ ಮೊದಲಾದ ಪರಿಕರಗಳನ್ನು ಕೆ.ಕೆ.ಕೊಚ್ಚಿ ಫೇಮಿಲಿ ಸದಸ್ಯರಾದ ಕೆ.ಕೆ.ನದೀಂ ಮೊಯಿದು ಹಾಜಿ, ಅಬ್ದುಲ್ ನಾಸಿರ್,ಬಾತಿಶಾ ನೀಡಿ ಸಹಕರಿಸಿದರು.
ಅವರ ಕೊಡುಗೆಗಳನ್ನು ಸ್ಮರಿಸಿ ಖತೀಬ್ ಉಸ್ತಾದರ ನೇತೃತ್ವದಲ್ಲಿ ವಿಶೇಷ ದುಆಃ ನಡೆಸಿ,ಕ್ರತಜ್ಞತೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಜಮಾತ್ ಕಾರ್ಯದರ್ಶಿ ಅಬ್ದುಲ್ ಖಾದರ್ ಮುಸ್ಲಿಯಾರ್, ಜಮಾಅತ್ ಕೋಶಾಧಿಕಾರಿ ಅರೆಯಲಾಡಿ ಯೂಸುಫ್ ಹಾಜಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಕೋಶಾಧಿಕಾರಿ ನೆಕ್ಕರೆ ಇಸ್ಮಾಯಿಲ್ ಹಾಜಿ, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಇದರ ಸಾರಥಿಗಳು, ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ಇದರ ಪದಾಧಿಕಾರಿಗಳು, ಕಾವು, ಅರೆಯಲಡಿ ಜಮಾಅತಿನ ಅಧ್ಯಕ್ಷರುಗಳು, ಉಸ್ತಾದರುಗಳು, ಹಾಗೂ ಜಮಾತಿನ ಎಲ್ಲಾ ಪದಾಧಿಕಾರಿಗಳು ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಾಡನ್ನೂರು ಮದ್ರಸ ಮುಖ್ಯೋ ಪಾಧ್ಯಾಯರಾದ ಅಮೀರ್ ಅರ್ಶದಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.