ಇಂಗ್ಲೆಂಡ್ ಪರ ಮೂವರು ಆಟಗಾರರು ಶತಕ ಗಳಿಸಿದರು..
ಆಮ್ಸ್ಟೆಲ್ವೀನ್ (ವಿಶ್ವ ಕನ್ನಡಿಗ ನ್ಯೂಸ್) : ಏಕದಿನ ಕ್ರಿಕೆಟ್ ನಲ್ಲಿ ಅತ್ಯಧಿಕ ಸ್ಕೋರ್ ಗಳಿಸುವ ಮೂಲಕ ಇಂಗ್ಲೆಂಡ್ ತನ್ನದೇ ಆದ ವಿಶ್ವದಾಖಲೆಯನ್ನು ಮುರಿದಿದೆ. ಇಂದು ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನಿಗದಿತ 50 ಓವರ್ ಗಳಲ್ಲಿ ಇಂಗ್ಲೆಂಡ್ 498 ರನ್ ಗಳಿಸಿತ್ತು.
ಇಂಗ್ಲೆಂಡ್ ಪರ ಫಿಲ್ ಸಾಲ್ಟ್, ಡೇವಿಡ್ ಮಲಾನ್ ಮತ್ತು ಜೋಸ್ ಬಟ್ಲರ್ ಶತಕ ಗಳಿಸಿದರು. ಬಟ್ಲರ್ ಕೇವಲ 70 ಎಸೆತಗಳಲ್ಲಿ 162 ರನ್ ಗಳಿಸಿದರು. ಡೇವಿಡ್ ಮಲಾನ್ 109 ಎಸೆತಗಳಲ್ಲಿ 125 ರನ್ ಗಳಿಸಿದರೆ, ಫಿಲ್ಸಾಲ್ಡ್ 93 ಎಸೆತಗಳಲ್ಲಿ 122 ರನ್ ಗಳಿಸಿದರು. ಕೊನೆಯಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ 22 ಎಸೆತಗಳಲ್ಲಿ 66 ರನ್ ಗಳಿಸಿದರು.
2018ರಲ್ಲಿ ನಾಟಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 481 ರನ್ ಬಾರಿಸಿ ವಿಶ್ವದಾಖಲೆ ಬರೆದಿತ್ತು. ಇದೀಗ ಇಂಗ್ಲೆಂಡ್ ತನ್ನದೇ ಆದ ಆ ದಾಖಲೆಯನ್ನು ಮುರಿದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.