ಕನ್ಯಾನ (www.vknews.in) : SYS ಕನ್ಯಾನ ಸೆಂಟರ್ ಹಾಗೂ SSF ಕನ್ಯಾನ ಸೆಕ್ಟರ್ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ SSF ಬ್ಲಡ್ ಸೈಬೋ ಕರ್ನಾಟಕ ಇದರ 273 ನೇ ಬೃಹತ್ ರಕ್ತದಾನ ಶಿಬಿರ ಜೂನ್ 5 ಆದಿತ್ಯವಾರ ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ಕನ್ಯಾನ ಸೆಕ್ಟರ್ ಅಧ್ಯಕ್ಷರಾದ ಶಬೀರ್ ವಹಿಸಿದರು. SYS ಕನ್ಯಾನ ಸೆಂಟರ್ ಅಧ್ಯಕ್ಷ ಸುಲೈಮಾನ್ ಸಖಾಫಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೆ ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು.
ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಪಿ ಅಬ್ದುರ್ರಹ್ಮಾನ್, ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ ವೈದ್ಯಾಧಿಕಾರಿ ಉಝ್ಮಾ ಫಾತಿಮ, ಮುಹಮ್ಮದ್ ಹಾಜಿ ಬಂಡಿತ್ತಡ್ಕ, ಖಾದರ್ ಸಅದಿ, ಇಬ್ರಾಹಿಂ ವಳಚ್ಚಿಲ್, ಸಿದ್ದೀಖ್ ಪೊಯ್ಯಗದ್ದೆ, ಆಸಿಫ್ ಬನಾರಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಲೀಂ ಹಾಜಿ ಬೈರಿಕಟ್ಟೆ ಸ್ವಾಗತಿಸಿದರು. ಜಬ್ಬಾರ್ ಸಖಾಫಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.