ಕೋಲಾರ (ವಿಶ್ವಕನ್ನಡಿಗ ನ್ಯೂಸ್): ಭಾರತ ಸೇವಾದಳ 2022-27ರ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಇಂದು ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕೆ.ಎಸ್. ಗಣೇಶ್ ಸೇರಿದಂತೆ ಕೆ.ಜಯದೇವ್,ಕೆ.ವಿ.ಜಗನ್ನಾಥ್, ಬಿ.ಎಂ. ಮುಭಾರಕ್, ಸಿಎಂಆರ್ .ಶ್ರೀನಾಥ್, ಎಂ. ನಾಗರಾಜ್, ಜಿ. ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.
ಒಟ್ಟು 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದ್ದು, ಇದರಲ್ಲಿ ಈಗಾಗಲೇ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಮಾತ್ರ ಇಂದು ನಗರದ ಪತ್ರಕರ್ತರ ಭವನದಲ್ಲಿ ಚುನಾವಣೆ ನಡೆಯಿತು.ಸದರಿ ಚುನಾವಣೆಯಲ್ಲಿ ಒಟ್ಟು 530 ಮತಗಳ ಪೈಕಿ 345 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 5 ಮತ ತಿರಸ್ಕøತಗೊಂಡಿತ್ತು.
ಇದರಲ್ಲಿ ಕೆಎಸ್.ಗಣೇಶ್-321, ಕೆ.ಜಯದೇವ್-301, ಕೆ.ವಿ.ಜಗನ್ನಾಥ್-301, ಬಿ.ಎಂ.ಮುಭಾರಕ್-283,ಸಿಎಂಆರ್ ಶ್ರೀನಾಥ್-283, ಎಂ.ನಾಗರಾಜ್-260, ಜಿ.ಶ್ರೀನಿವಾಸ್-254 ಮತಗಳನ್ನು ಪಡೆದು ಆಯ್ಕೆಯಾದರು.
ಮೊದಲೇ 8 ಮಂದಿ ಅವಿರೋಧ ಆಯ್ಕೆ ಭಾರತ ಸೇವಾದಳ ಜಿಲ್ಲಾ ಸಮಿತಿಗೆ ಪ್ರತಿ ತಾಲ್ಲೂಕಿನಿಂದ ಒಬ್ಬರಂತೆ ಈ ಹಿಂದೆಯೇ 6 ಮಂದಿ ಆಯ್ಕೆಯಾಗಿದ್ದು, ಮಾಲೂರು ತಾಲ್ಲೂಕು-ಬಹುದ್ದೂರು ಸಾಬ್, ಬಂಗಾರಪೇಟೆ-ಚಿನ್ನಿವೆಂಕಟೇಶ್, ಕೆಜಿಎಫ್-ಡಾ.ಮುರಳಿಧರ್, ಮುಳಬಾಗಿಲು- ಬಿ.ಕೆ.ವೆಂಕಟನಾರಾಯಣ್, ಶ್ರೀನಿವಾಸಪುರ-ರವಿಕುಮಾರ್, ಕೋಲಾರ-ಎಸ್.ಸುಧಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಜಿಲ್ಲಾ ಸೇವಾದಳ ಸಮಿತಿಯಲ್ಲಿ ಇಬ್ಬರು ಶಿಕ್ಷಕರಿಗೆ ಅವಕಾಶ ಕಲ್ಪಿಸಬೇಕಾಗಿದ್ದು, ಮುಳಬಾಗಿಲಿನ ಶಿಕ್ಷಕರಾದ ಸೋಮಶೇಖರರೆಡ್ಡಿ, ಕಲಾವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಬೆಳಗ್ಗೆ 9 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.60 ಮತದಾನವಾಗಿತ್ತು. ಚುನಾವಣಾಧಿಕಾರಿಗಳಾಗಿ ಭಾರತ ಸೇವಾದಳ ಕೇಂದ್ರ ಸಮಿತಿಯಿಂದ ಮಹೇಶ್ಗೌಡ ಆಗಮಿಸಿದ್ದರು.
ಉಳಿದಂತೆ ಹಿರಿಯ ಸಹಕಾರಿ ಅಬ್ಬಣಿ ಶಂಕರ್, ಸಹಕಾರ ಇಲಾಖೆಯ ಕೆಂಪಯ್ಯ, ಶ್ರೀನಿವಾಸಪುರದ ಶಬೀರ್ ಅಹಮದ್, ವೇಣು, ಜಿಲ್ಲಾ ಭಾರತ ಸೇವಾದಳ ಸಂಘಟಕ ದಾನೇಶ್ ಚುನಾವಣಾ ಕಾರ್ಯ ನಿರ್ವಹಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಗೆ ಚುನಾಯಿತರಾದ ಸದಸ್ಯರನ್ನು ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಹಾಜರಿದ್ದು, ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್. ಗಣೇಶ್, ಭಾರತ ಸೇವಾದಳ ಘಟಕಗಳನ್ನು ಜಿಲ್ಲೆಯ ಪ್ರತಿ ಶಾಲೆಯಲ್ಲಿ ತೆರೆಯುವ ಮೂಲಕ ಬಲಗೊಳಿಸುವ ಉದ್ದೇಶ ಹೊಂದಲಾಗಿದೆ, ರಾಷ್ಟ್ರಧ್ವಜ ಬಳಸುವ ವಿಧಾನವನ್ನು ಪ್ರತಿ ಶಾಲೆಯಲ್ಲೂ ತಿಳಿಸುವ ಮೂಲಕ ಜಿಲ್ಲಾಮಟ್ಟದಲ್ಲಿ ರಾಷ್ಟ್ರಧ್ವಜ ಬಳಕೆ ಕುರಿತ ತರಬೇತಿ ಕಾರ್ಯಾಗಾರವನ್ನು ಶಿಕ್ಷಕರಿಗಾಗಿ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.