ಕರೋಪಾಡಿ(ವಿಶ್ವಕನ್ನಡಿಗ ನ್ಯೂಸ್): ಸಂತ ಲಾರೆನ್ಸ್ ಹೈಸ್ಕೂಲ್ ವಿಜಯಡ್ಕ, ಕರೋಪಾಡಿ, ಬಂಟ್ವಾಳ. ದಿನಾಂಕ 30-6-2022 ರ ಗುರುವಾರ ರಕ್ಷಕ – ಶಿಕ್ಷಕರ ಸಭೆ ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕರು, ಸ್ಥಳೀಯ ಸಂತ ಲಾರೆನ್ಸ್ ಚರ್ಚ್ ನ ಧರ್ಮಗುರುಗಳು ವಂದನೀಯ ಫಾದರ್ ಎದ್ವಿನ್ ಸಂತೋಷ್ ಮೋನಿಸ್ ಮಾತನಾಡುತ್ತಾ ಮಕ್ಕಳು ದೇವರು ಕೊಟ್ಟ ವರ. ಅವರನ್ನು ಕೆಟ್ಟ ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಿ. ಉತ್ತಮ ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದು ತಿಳಿಸುತ್ತಾ ಶುಭ ಹಾರೈಸಿದರು.
ಕಳೆದ ಶೈಕ್ಷಣಿಕ ವರ್ಷದ ಸಂಘದ ಉಪಾಧ್ಯಕ್ಷರು ಶ್ರೀ. ಯುತ. ರಫೀಕ್ ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ರೀಮತಿ. ಲವೀನಾ ಮೊಂತೆರೊ ಇವರು ಕಳೆದ ಶೈಕ್ಷಣಿಕ ಸಾಲಿನ ವರದಿ ಒಪ್ಪಿಸಿದರು.
ಮುಖ್ಯ ಶಿಕ್ಷಕರಾದ ಶ್ರೀ ಯುತ. ಜೋಯಲ್ ವಿ ಮೊಂತೆರೊ ಶೈಕ್ಷಣಿಕ ಮಾಹಿತಿ ನೀಡಿದರು. 2022-23ನೇ ಶೈಕ್ಷಣಿಕ ಸಾಲಿನ ರಕ್ಷಕ -ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಶ್ರೀ ಯುತ. ಜಾನ್ ಮೊಂತೆರೊ ಆಯ್ಕೆಯಾದರು.
ಮುಖ್ಯಶಿಕ್ಷಕರು ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸಿದರು. ಸಹ ಶಿಕ್ಷಕಿ ಕು. ಪುಷ್ಪಾವತಿ ವಂದಿಸಿದರು. ಸಹ ಶಿಕ್ಷಕ ಶ್ರೀ. ಸುರೇಶ್ ನಾಯ್ಕ್. ಕೆ. ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.