(www.vknews.in) : ಸಣ್ಣ ಪುಟ್ಟ ಮಕ್ಕಳ ಮರಣದ ಸಂಖ್ಯೆ ದಿನ ನಿತ್ಯ ಅಧಿಕಗೊಳ್ಳುತ್ತಲೇ ಇದೆ. ಕಳೆದೊಂದು ತಿಂಗಳಿನಿಂದೀಚೆಗೆ ಮರಣ ಹೊಂದಿದವರ ಸಂಖ್ಯೆಯಂತೂ ಹೇಳತೀರದು. ➡️ ದಾಳಿಂಬೆಯ ಬೀಜ ಗಂಟಲಲ್ಲಿ ಸಿಲುಕಿ ಮಗು ಮೃತ್ಯು ➡️ ಬಾಟಲಿಯ ಮುಚ್ಚಲು ಗಂಟಲಲ್ಲಿ ಸಿಲುಕಿ ಮಗು ಮೃತ್ಯು ➡️ ನೀರಿನ ಬಕೆಟ್ ನೊಳಗೆ ಬಿದ್ದು ಮಗು ಮೃತ್ಯು ➡️ ಕೆಂಪು ಕಲ್ಲು ಬಿದ್ದು ಮಗು ಮೃತ್ಯು ➡️ ಸ್ವಿಚ್ಚ್ ಬೋರ್ಡ್ ಗೆ ಕೈ ಹಾಕಿದ 11 ತಿಂಗಳ ಮಗು ಮೃತ್ಯು ➡️ ಎದೆ ಹಾಲು ಗಂಟಲಿನಲ್ಲಿ ಸಿಲುಕಿ ಮಗು ಮೃತ್ಯು ➡️ ವಿದ್ಯುತ್ ಶಾಕ್ ಗೊಳಗಾಗಿ 4 ವರ್ಷದ ಮಗು ಮೃತ್ಯು
ಇದೆಲ್ಲವೂ ಇತ್ತೀಚಿನ ದಿನಗಳಲ್ಲಿ ಕೇಳಿಸಿಕೊಂಡ ಪುಟ್ಟ ಮಕ್ಕಳ ಮರಣದ ವಾರ್ತೆಗಳಾಗಿವೆ. ಇವೆಲ್ಲವೂ ಕೂಡ ಊಹಿಸಲೂ ಕೂಡ ಸಾಧ್ಯವಾಗದ ಮರಣಗಳಾಗಿದೆ.
ಮಕ್ಕಳು ಮನೆಯ ಅನುಗ್ರಹಗಳಾಗಿದೆ. ಪ್ರತಿಯೊಬ್ಬ ಹೆತ್ತವರೂ ಮಕ್ಕಳ ಪಾಲನೆಯ ಕುರಿತು ಅತೀವ ಜಾಗೃತರಾಗುತ್ತಿದ್ದಾರೆ. ಆದರೂ ಅವರ ಕಣ್ತಪ್ಪಿಸಿ ಮಕ್ಕಳು ಅನಾಹುತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ಅನೇಕ ಘಟನೆಗಳು ನಡೆಯುತ್ತಲೇ ಇದೆ. ಮನೆಯಲ್ಲಿರುವ ಇನ್ವರ್ಟ್ , ಪ್ಲಗ್ ಬಾಕ್ಸ್ , ಐರನ್ ಬಾಕ್ಸ್ ಗಳು ಬಹುತೇಕ ಮಕ್ಕಳ ಬದುಕನ್ನು ಕೊನೆಗೊಳಿಸುತ್ತಿರುವ ಘಟನೆಗಳು ಹೆಚ್ಚುತ್ತಿದೆ. ಹೆತ್ತವರು ಮಕ್ಕಳ ಕೈಗಳಿಗೆ ಸಿಗದಂತೆ ಜಾಗರೂಕತೆ ವಹಿಸಬೇಕಾದ ಅನಿವಾರ್ಯತೆಯಿದೆ.
ಮಕ್ಕಳಿಗೆ ಎದೆ ಹಾಲುಣಿಸುವ ಬಹುತೇಕ ತಾಯಂದಿರು ಹಾಲುಣಿಸುತ್ತಿರುವಾಗಲೇ ನಿದ್ದೆಗೆ ಜಾರುವ ಪ್ರಸಂಗಗಳೂ ನಡೆಯುತ್ತಿದೆ. ಒಂದು ರೀತಿಯ ಬೇಜವಾಬ್ದಾರಿಯೂ ಇದಾಗಿರುತ್ತದೆ. ವರ್ಷಗಳ ಹಿಂದೆ ಕೇರಳದಲ್ಲಿ ಹಾಲುಣಿಸುವಾಗ ನಿದ್ದೆಗೆ ಜಾರಿದ ತಾಯಿಯಿಂದಾಗಿ ಮಗು ಶ್ವಾಸಕಟ್ಟಿ ಮೃತಪಟ್ಟ ದಾರುಣ ಘಟನೆಯೊಂದು ನಡೆದಿತ್ತು!
ಮಕ್ಕಳಿರುವ ಮನೆಯಲ್ಲಿ ಅವರ ಕೈಗೆ ಸಿಗುವ ರೀತಿಯಲ್ಲಿ ನೀರಿರುವ ಪಾತ್ರೆಗಳೋ, ಬಕೆಟ್ ಗಳನ್ನೋ ಇಡಲೇಬಾರದು. ಇಣುಕಿ ನೋಡುವ ಭರದಲ್ಲಿ ಹಳಿ ತಪ್ಪಿ ಅದರೊಳಗೆ ಬಿದ್ದು ಮೃತಪಟ್ಟ ಹಲವು ಘಟನೆಗಳು ನಡೆದಿದ್ದರೂ ಆ ಘಟನೆ ಮರೆಯುವುದರೊಂದಿಗೆ ಹೆತ್ತವರ ಜಾಗೃತೆಗಳೂ ಮಾಯವಾಗುತ್ತದೆ.
ಯಾವುದೇ ವಸ್ತುವಾದರೂ ಇರುವಾಗ ಅದರ ಮೌಲ್ಯಗಳು ನಮಗೆ ಅರ್ಥವಾಗುವುದಿಲ್ಲ, ಕಳೆದುಕೊಂಡಾಗಲೇ ನಾವು ಎಚ್ಚರಗೊಳ್ಳುವುದು. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವಾಗಲೂ ಹೆತ್ತವರು ಮಕ್ಕಳ ಮೇಲೆ ನಿಗಾ ವಹಿಸಿಕೊಳ್ಳಬೇಕು. ನಮ್ಮೆಲ್ಲರ ಮಕ್ಕಳನ್ನು ಸರ್ವಶಕ್ತನು ಅನಿರೀಕ್ಷಿತ ಮರಣಗಳಿಂದ ಸಂರಕ್ಷಿಸಲಿ. ಮೃತಪಟ್ಟ ಮಕ್ಕಳ ಹೆತ್ತವರಿಗೆ ಸಹನೆಯನ್ನು ದಯಪಾಲಿಸಲಿ – ಆಮೀನ್.
– ಸ್ನೇಹಜೀವಿ ಅಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.