ಚಿಕ್ಕಬಳ್ಳಾಪುರ (ವಿಶ್ವ ಕನ್ನಡಿಗ ನ್ಯೂಸ್) : ಕೋಳಿ ಸುಡುವ ಬರ್ನರ್ ನಲ್ಲಿ ಪತಿಯನ್ನು ಪತ್ನಿಯೇ ಸುಟ್ಟು ಕೊಲೆ ಮಾಡಿದ ಘಟನೆ ಶಿಡ್ಲಘಟ್ಟ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಲವ್ವರ್ ಜೊತೆ ಸೇರಿ ಈಕೆ ಕೋಳಿ ಸುಡುವ ಬರ್ನರ್ ನಲ್ಲಿ ಸುಟ್ಟು ಕೊಲೆ ಮಾಡಿದ್ದಾಳೆ. ದಾದಾಪೀರ್ ಎಂಬಾತ ಕೊಲೆಯಾದವನಾಗಿದ್ದಾನೆ.
8 ತಿಂಗಳ ಮೊದಲು ನಡೆದ ಪ್ರಕರಣದ ಅಸಲಿಯತ್ತು ಇದೀಗ ಬಹಿರಂಗವಾಗಿದೆ. ಇದೀಗ ಪ್ರಕರಣ ಸಂಬಂಧ ಗಂಜಿಗುಂಟೆ ಗ್ರಾಮದ ಮೆಹರ್ ಮತ್ತು ಆಕೆಯ ಪ್ರಿಯಕರ ತೌಸಿಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಪ್ರಿಯತಮನ ಜೊತೆ ಸೇರಿ ಕೊಲೆ ಮಾಡಿರುವುದನ್ನು ಮೆಹರ್ ಪೊಲೀಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ಈಕೆ ತನ್ನ ಗಂಡನಿಗೆ ನಿದ್ರೆ ಮಾತ್ರೆ ನೀಡಿ ಪ್ರಜ್ಞೆ ತಪ್ಪಿಸಿ, ಬಳಿಕ ಕೋಳಿ ಸುಡುವ ಗ್ಯಾಸ್ ಗನ್ ನಿಂದ ಸುಟ್ಟು ಕೊಂಡಿದ್ದಾಳೆ. ಪೊಲೀಸರು ಮೆಹರ್ ಮತ್ತು ಆಕೆಯ ಪ್ರಿಯಕರನನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.