(www.vknews.in) : ಈ ಬಾರಿಯ ಕೇರಳ ಬೋರ್ಡ್ ಆಫ್ ಪಬ್ಲಿಕ್ ಎಕ್ಸಾಮಿನೇಷನಲ್ಲಿ ಫಾತಿಮಾ ಇಂಗ್ಲಿಷ್ ಮೀಡಿಯಂ ಸ್ಕೂಲ್, ಪಾವೂರ್ – ಮಂಜೇಶ್ವರದಿಂದ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದು, ಕತೀಜತ್ ಜುನೈನ ಮತ್ತು ಫಾತಿಮಾ ಲೂಲು ಅತ್ಯಧಿಕ ಅಂಕಗಳಿಸಿ ವಿಧ್ಯಾಲಯಕ್ಕೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ. ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕ ಬಳಗವನ್ನು ಅಭಿನಂದಿಸಲು ತಾರೀಕು 29 ಜೂನ್ 2022ರಂದು ಕಾರ್ಯಕ್ರಮವೊಂದನ್ನು ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಂಜೇಶ್ವರ ಸಹಾಯಕ ಉಪನಿರೀಕ್ಷಕ ಪೊಲೀಸ್ ಅಧಿಕಾರಿ ಶ್ರೀ ಟೋನಿಯವರು ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳ ಪ್ರಾವೀಣ್ಯತೆಯನ್ನು ಕೊಂಡಾಡಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಚೇರ್ಮನ್ ಡಾ. ಮೊಹಮ್ಮದ್ ಇಬ್ರಾಹಿಂ ಪಾವೂರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಗಳೂರು ಎಕನಾಮಿಕ್ ಅಂಡ್ ನಾರ್ಕೋಟಿಕ್ ಠಾಣಾ ಅದೀಕ್ಸಕಿ ಶ್ರೀಮತಿ ಶ್ರೀಲತಾ, ಕೇರಳ ಗ್ರಾಮೀಣ್ ಬ್ಯಾಂಕ್ ವ್ಯವಸ್ಥಾಪಕ ಶ್ರೀ ಮೊಹಮ್ಮದ್ ಫಿರೋಜ್, ಸಾಲ ನಿರ್ವಹಣಾ ಅಧಿಕಾರಿ ಶ್ರೀ ಅಶೋಕ್, ಸ್ಥಳೀಯ ವಾರ್ಡ್ ಮೆಂಬರ್ ಶ್ರೀಮತಿ ಖೈರುನ್ನೀಸಾ, ಮಸೀದಿ ಅಧ್ಯಕ್ಸ ಹಾಜಿ ಮೋನು ಶ್ರೀ ಹನೀಫ್ ಗೋಲ್ಡ್ ಕಿಂಗ್, ಅಬ್ದುಲ್ ಲತೀಫ್ ಅಬುಧಾಬಿ ಮುಖ್ಯ ಅಥಿತಿಗಳಾಗಿ ಆಗಮಿಸಿದರು.
ಶಾಲಾ ಶೈಕ್ಷಣಿಕ ನಿರ್ದೇಶಕ ಡಾ. ಶೇಖ್ ಬಾವ ಮಂಗಳೂರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡುತ್ತ ಕೋವಿಡ್ ಕಾಲದಲ್ಲಿ ಬಂದ ಕೆಲವು ಅಡಚಣೆಗಳನ್ನು ದಾಟಿ ಸಂಸ್ಥೆಯು ಮತ್ತಷ್ಟು ಪ್ರಗತಿಯಿಂದ ಸಾಗಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ ಅಲ್ಲದೆ ಬರುವ ದಿವಸಗಳಲ್ಲಿ ಇಲ್ಲಿ ವಿಭಿನ್ನವಾದ ಕೋರ್ಸ್ ಗಳು ಆರಂಭಗೊಳ್ಳಲಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳನ್ನು ಸ್ಮರಣಿಕೆ ಮತ್ತು ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತಲ್ಲದೆ ಅತ್ಯುನ್ನತ ಅಂಕಗಳೊಂದಿಗೆ ಪಾಸಾದ ವಿದ್ಯಾರ್ಥಿನಿಯಿಬ್ಬರನ್ನು ಚಿನ್ನದ ನಾಣ್ಯ ನೀಡಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.