ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): 18 ರಿಂದ 40 ವರ್ಷ ವಯಸ್ಸಿನೊಳಗಿನ ಕಟ್ಟಡ ಕಾರ್ಮಿಕರು ಹಾಗೂ ಇತರ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಪಿ ಎಂ ಎಸ್ ವೈ ಎಂ ಯೋಜನೆಯಡಿ ನೋಂದಾಯಿಸುವ ಶಿಬಿರ ಬಂಟ್ವಾಳ-ಕೈಕಂಬದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿಯಲ್ಲಿ ಜುಲೈ 12 ರಿಂದ ಪ್ರಾರಂಭಗೊಂಡಿದ್ದು, ಜುಲೈ 26ರವರೆಗೂ ನಡೆಯಲಿದೆ.
ಈ ಯೋಜನೆಯಡಿ ಚಂದಾದಾರರು ಪಾವತಿಸುವ ವಂತಿಗೆಗೆ ಕೇಂದ್ರ ಸರಕಾರ ಸಮಾನಾಂತರ ವಂತಿಗೆಯನ್ನು ಚಂದಾದಾರರ ಖಾತೆಗೆ ಮಾಡುತ್ತದೆ. 60 ವರ್ಷದ ಬಳಿಕ ತಿಂಗಳಿಗೆ ಮಾಸಿಕ ಕನಿಷ್ಠ 3 ಸಾವಿರ ರೂಪಾಯಿಯಂತೆ ಪಿಂಚಣಿ ರೂಪದಲ್ಲಿ ಚಂದಾದಾರರ ಖಾತೆಗೆ ಜಮೆಯಾಗುತ್ತದೆ. ತುರ್ತು ಸಂದರ್ಭದಲ್ಲಿ ಕಟ್ಟಿದ ಹಣವು ಸರಕಾರದ ಪಾಲಿನ ವಂತಿಗೆ ಹಾಗೂ ಬಡ್ಡಿ ಸಮೇತವಾಗಿ ಹಿಂಪಡೆಯಬಹುದಾಗಿದೆ.
ಪಿ ಎಫ್ ಪಡೆಯುವ ಕಾರ್ಮಿಕರನ್ನು ಹೊರತುಪಡಿಸಿ ಇತರ ಎಲ್ಲಾ ಕಾರ್ಮಿಕರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ನೋಂದಣಿಗೆ ಬರುವ ಕಾರ್ಮಿಕರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡಿನಲ್ಲಿ ನೋಂದಾಯಿಸಲಾಗಿರುವ ಸಂಖ್ಯೆಯ ಮೊಬೈಲ್ ಸೆಟ್, ನಾಮನಿರ್ದೇಶಿತರ (ನಾಮಿನಿ) ಆಧಾರ್ ಕಾರ್ಡ್ ಗಳನ್ನು ತರುವಂತೆ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.