ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಬುಧಾಬಿ ಝೋನ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸೆಕ್ಟರ್ ಗಳಲ್ಲಿ ಈದುಲ್ ಅಝಾ ಪ್ರಯುಕ್ತ ಈದ್ ಸಂಗಮ ಮತ್ತು ಪ್ರಾರ್ಥನಾ ಮಜ್ಲಿಸ್ ಸಂಘಟಿಸಿಲಾಯಿತು. ಮದೀನಾ ಝಾಯಿದ್ ಸೆಕ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಮಾಯೀಲ್ ಅಹ್ಸನಿ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಅಬುಧಾಬಿ ಸಮಿತಿಯ ಅಧ್ಯಕ್ಷ ಮೌಲಾನ ಹಸೈನಾರ್ ಅಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸನಯ್ಯ ಸೆಕ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾರೂಕ್ ಸಖಾಫಿ ಕನ್ಯಾನ ಅದ್ಯಕ್ಷತೆ ವಹಿಸಿದ್ದರು. ಸುಹೈಲ್ ಸಕಾಫಿ ದುಆ ಮಜ್ಲಿಸ್ ಗೆ ನೇತೃತ್ವ ವಹಿಸಿದ್ದರು. ಝೋನ್ ಸಮಿತಿಯ ಅಬೂಬಕ್ಕರ್ ಕಂಬಳಬೆಟ್ಟು ಹಾಜರಿದ್ದರು. ಇದಲ್ಲದೆ ಮುಸಪ್ಪ ಸನಯ್ಯ ಸೆಕ್ಟರ್ ವ್ಯಾಪಿಯ ಐಕಾಡ್, ಬಾನಿಯಾಸ್ ಮತ್ತು ಶಂಖ ಶಾಕೆಗಳಲ್ಲೂ ಈದ್ ಸಂಗಮ ನಡೆಸಲಾಯಿತು.
ಎಂಬಿಝಡ್ ಸೆಕ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯ ಮೌಲಾನ ಹಮೀದ್ ಸಅದಿ ದುಆ ನಡೆಸಿದರು. ಕೆಸಿಎಫ್ ಅಬುಧಾಬಿ ಸಮಿತಿಯ ಮೂಸ ಮದನಿ ಸಂಪ್ಯ, ಉಮರ್ ಈಶ್ವರ ಮಂಗಿಲ, ನವಾಝ್ ಕೆ ಸಿ ರೋಡ್ ಬಾಗವಹಿಸಿ ಶುಭ ಹಾರೈಸಿದರು.
ಮರ್ಕಝಿಯ ಸೆಕ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟೀಯ ನೇತಾರ ಕೆ ಎಚ್ ಅಹಮದ್ ಸಖಾಫಿ ನೇತೃತ್ವ ವಹಿಸಿದ್ದರು. ಅಬುಧಾಬಿ ಸಮಿತಿಯ ಹಸನ್ ಹಾಜಿ, ಅಶ್ರಫ್ ಸರಲಿಕಟ್ಟೆ ಜೊತೆಗಿದ್ದರು. ಮೂರೂರ್ ಸೆಕ್ಟರ್ ನ ದೆಲ್ಮ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ನೇತಾರ ಹಕೀಂ ತುರ್ಕಲಿಕೆ, ಅಬುಧಾಬಿ ಸಮಿತಿಯ ಕಬೀರ್ ಬಾಯಂಬಾಡಿ, ಹಾಫಿಲ್ ಸಯೀದ್ ಹನೀಫ್ ಮುಂತಾದ ನಾಯಕರು ಬಾಗವಹಿಸಿದರೆ ಆಲಂ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮರ್ ಸಕಾಫಿ ನೇತೃತ್ವ ವಹಿಸಿ ಶುಭ ಹಾರೈಸಿದರು.
ಖಾಲಿದಿಯ ಸೆಕ್ಟರ್ ನಲ್ಲಿ ನಡೆದ ಸಮಾರಂಭದಲ್ಲಿ ಹಮೀದ್ ಮುಸ್ಲಿಯಾರ್ ಕುಪ್ಪೆಟ್ಟಿ, ಹಾರಿಸ್ ಸಅದಿ ನೇತೃತ್ವ ವಹಿಸಿದ್ದರು. ಖಾಲಿದಯ ಸೆಕ್ಟರ್ ನ ಬತೀನ್ ಶಾಕೆ ಯಲ್ಲೂ ಈದ್ ಸಂಗಮ ನಡೆಸಲಾಯಿತು. ಅಲ್ ವಹ್ದ ಸೆಕ್ಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ರಾಹೀಂ ಮುಸ್ಲಿಯಾರ್, ಎನ್ ಕೆ ಕಾದರ್ ಹಾಜಿ, ಯೂಸುಫ್ ಅನಿಲಕಟ್ಟೆ, ನಾಸಿರ್ ಕೊಡಗು ಮುಂತಾದ ನಾಯಕರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.