ಪಾಕಿಸ್ತಾನ (ವಿಶ್ವ ಕನ್ನಡಿಗ ನ್ಯೂಸ್) : ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬ ತನ್ನ ಆರು ಮಕ್ಕಳ ಮುಂದೆ ಹೆಂಡತಿಯನ್ನು ಕೊಲೆ ಮಾಡಿ ಬೇಯಿಸಿದ ಘಟನೆ ವರದಿಯಾಗಿದೆ. ಜಿಯೋ ನ್ಯೂಸ್ ಪ್ರಕಾರ, ನರ್ಗೀಸ್ ಎಂಬವರನ್ನು ಪತಿ ಕೊಂದು, ಕಡಾಯಿಯಲ್ಲಿ ಹಾಕಿ ಬೇಯಿಸಿದ್ದಾನೆ. ಪೊಲೀಸರು ನಗರದ ಖಾಸಗಿ ಶಾಲೆಯ ಅಡುಗೆಮನೆಯಲ್ಲಿನ ಕಡಾಯಿಯಲ್ಲಿ ಆಕೆಯ ಶವವನ್ನು ಪತ್ತೆ ಮಾಡಿದರು.
ಮಹಿಳೆಯ ಪತಿ ಆಶಿಕ್ ಶಾಲೆಯೊಂದರಲ್ಲಿ ವಾಚ್ಮನ್ ಆಗಿದ್ದು, ಶಾಲೆಯ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆಶಿಕ್ ತನ್ನ ಮೂವರು ಮಕ್ಕಳೊಂದಿಗೆ ಸ್ಥಳದಿಂದ ಓಡಿಹೋದ ನಂತರ ಸಂತ್ರಸ್ತೆಯ 15 ವರ್ಷದ ಮಗಳು ಪೊಲೀಸರಿಗೆ ಫೋನ್ ಮಾಡಿ ವಿವರ ನೀಡಿದ್ದಾಳೆ. ಇತರ ಮೂವರು ಮಕ್ಕಳು ಪೊಲೀಸ್ ವಶದಲ್ಲಿದ್ದು, ಅವರು ಆಘಾತಕ್ಕೊಳಗಾಗಿದ್ದಾರೆ.
ಮೃತರ ದೇಹವನ್ನು ವೈದ್ಯಕೀಯ ಮತ್ತು ಕಾನೂನು ವಿಧಿವಿಧಾನಗಳಿಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಆರಂಭಿಕ ವಿಚಾರಣೆಗಳು ಮತ್ತು ಮಕ್ಕಳ ಹೇಳಿಕೆಗಳ ಪ್ರಕಾರ ಪತಿಯು ತನ್ನ ಹೆಂಡತಿಯನ್ನು ಕಡಾಯಿಯಲ್ಲಿ ಕುದಿಸುವ ಮೊದಲು ದಿಂಬಿನಿಂದ ಕತ್ತು ಹಿಸುಕಿದ್ದಾನೆ ಎಂದು ತಿಳಿದುಬಂದಿದೆ. ಮಹಿಳೆಯ ಒಂದು ಕಾಲು ಕೂಡ ದೇಹದಿಂದ ಬೇರ್ಪಟ್ಟಿತ್ತು. ದುರಂತಕ್ಕೆ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.