61 ಎಸೆತಗಳಲ್ಲಿ 109 ರನ್ ಗಳಿಸಿದ 18 ವರ್ಷದ ಬ್ಯಾಟ್ಸ್ಮನ್..
(ವಿಶ್ವ ಕನ್ನಡಿಗ ನ್ಯೂಸ್) : ಫ್ರೆಂಚ್ ಕ್ರಿಕೆಟಿಗ ಗುಸ್ತಾವ್ ಮೆಕೆನ್ ಟಿ20ಯಲ್ಲಿ ಶತಕ ಸಿಡಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. 18 ವರ್ಷದ ಗುಸ್ತಾವ್ ಮೆಕೆನ್ ವಾಂಟಾದಲ್ಲಿ ನಡೆದ ಸ್ವಿಟ್ಜರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 61 ಎಸೆತಗಳಲ್ಲಿ 109 ರನ್ ಗಳಿಸಿದರು.
18 ವರ್ಷ ಮತ್ತು 280 ದಿನ ವಯಸ್ಸಿನ ಫ್ರಾನ್ಸ್ನ ಆರಂಭಿಕ ಆಟಗಾರ ಗುಸ್ತಾವ್ ಮೆಕ್ಕಿಯಾನ್ ಪುರುಷರ ಕ್ರಿಕೆಟ್ನಲ್ಲಿ T20 ಶತಕ ಗಳಿಸಿದ ಅತೀ ಕಿರಿಯ ಆಟಗಾರ ಎನಿಸಿಕೊಂಡರು. ಅವರ 109 ರನ್ ಗಳ ಇನ್ನಿಂಗ್ಸ್ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್ಗಳಿಂದ ಕೂಡಿತ್ತು. ಯುವ ಆಟಗಾರನಿಗೆ ಇದು ಎರಡನೇ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಇವರು ಚೆಕ್ ರಿಪಬ್ಲಿಕ್ ವಿರುದ್ಧ ಆಡಿದ ಚೊಚ್ಚಲ ಪಂದ್ಯದಲ್ಲಿ 54 ಎಸೆತಗಳಲ್ಲಿ 76 ರನ್ ಗಳಿಸಿದ್ದರು.
ಈ ಮೊದಲು 2019 ರಲ್ಲಿ ಐರ್ಲೆಂಡ್ ವಿರುದ್ಧ ಅಫ್ಘಾನಿಸ್ತಾನದ ಆರಂಭಿಕ ಆಟಗಾರ 20 ವರ್ಷ ಮತ್ತು 337 ದಿನ ವಯಸ್ಸಿನ ಹಜರತುಲ್ಲಾ ಝಜೈ 62 ಎಸೆತಗಳಲ್ಲಿ ಅಜೇಯ 162 ರನ್ ಗಳಿಸುವುದರೊಂದಿಗೆ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಮೆಕ್ಕಿಯಾನ್ ಎರಡು ವರ್ಷಗಳ ಬಳಿಕ ಮುರಿದರು.
T20I ಶತಕ ಗಳಿಸಿದ ಐದು ಕಿರಿಯ ಪುರುಷ ಆಟಗಾರರು..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.