(www.vknews.in) : ಹತ್ತು ದಿನಗಳಿಂದ ಮೂವರು ಯುವಕರ ಕೊಲೆ ನಮ್ಮ ನೆರೆಯ ಜಿಲ್ಲೆಯಲ್ಲಿ ನಡೆದಿದೆ. ಬೆಳ್ಳಾರೆ ಮಸೂದ್, ನೆಟ್ಟಾರ್ ಪ್ರವೀಣ್, ಸುರತ್ಕಲ್ ಫಾಝಿಲ್ ಮೂವರ ಕೊಲೆಯನ್ನು ನಾವು ಖಂಡಿಸುತ್ವೆ ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಕೊಲೆ ಆಗಬಾರದು. ನಿಜವಾದ ಕೊಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಶಾಂತಿ ಕಾಪಾಡಲು, ಸೌಹಾರ್ದ ಕಾಯಲು ಹೇಳಿಕೆ ನೀಡಿ. ಕೋಣೆಯಲ್ಲಿ ಕುಳಿತು ನೀವು ಪ್ರಚೋದಕ ಹೇಳಿದರೆ ಮುಗ್ಧರು ಬಲಿಯಾಗುತ್ತಾರೆ
ಮುಖ್ಯಮಂತ್ರಿ ಆದವರು ರಾಜ್ಯದ ಸರ್ವರ ಹಿತ ಕಾಪಾಡಬೇಕು. ಅದು ಸಂವಿಧಾನದ ಆಶಯ. ಆದರೆ ಈ ಮುಖ್ಯಮಂತ್ರಿ ಕೆಲವರ ಮನೆಗೆ ಭೇಟಿ ನೀಡುವುದು, ಕೆಲವರಿಗೆ ಪರಿಹಾರ ನೀಡುವುದು ನಾಚಿಕೆಗೇಡು. ಪ್ರವೀಣ್ ತಾಯಿ ಮನೆಯವರಂತೆ ಫಾಝಿಲ್, ಮಸೂದ್ ಮನೆ ತಾಯಿಯ ದುಃಖವೂ ಒಂದೇ. ಮುಖ್ಯಮಂತ್ರಿಯೇ ಪಕ್ಷಪಾತ ಮಾಡಿದರೆ ಅಧಿಕಾರಿಗಳು ಪಕ್ಷಪಾತ ಮಾಡುವುದಿಲ್ಲವೆ? ಪರಿಹಾರ ನೀಡುವುದು ಜನ ನೀಡುವ ತೆರಿಗೆ ಹಣ. ಮುಖ್ಯಮಂತ್ರಿ ಒಬ್ಬರಿಗೆ ಮಾತ್ರ ಪರಿಹಾರ ನೀಡಿದರೆ ಅದು ಅವರ ವೈಯಕ್ತಿಕ ಹಣವೇ ಎಂದು ಜೀಷಾನ್ ಪ್ರಶ್ನಿಸಿದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.