(www.vknews.in) : ಇಸ್ಲಾಮಿಕ್ ಹೊಸ ವರ್ಷದ ಮೊದಲ ದಿನ, ದಿನಾಂಕ 31-7-2022 ರಂದು SSF ಕರ್ನಾಟಕ ಬ್ಲಡ್ ಸೈಬೋ ಇದರ 278 ನೇ ರಕ್ತದಾನ ಶಿಬಿರವು ಯನೆಪೋಯ ಆಸ್ಪತ್ರೆ ಇದರ ಸಹಬಾಗಿತ್ವದಲ್ಲಿ ಅಮ್ಮೆಂಬಳದಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಜಅ್ ಫರ್ ಸಖಾಫಿ ಉಸ್ತಾದ್ ಕುಕ್ಕುದಕಟ್ಟೆ ಅಧ್ಯಕ್ಷತೆ ವಹಿಸಿದರು. ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯ ಖತೀಬರಾದ ಅಸ್ಸಯ್ಯದ್ ಅಮೀರ್ ಅಸ್ಸಖಾಫ್ ತಂಙಳ್ ನಾದಾಪುರಂ ದುಆದ ಮೂಲಕ ಚಾಲನೆ ನೀಡಿದರು.
ಸೆಕ್ಟರ್ ಕಾರ್ಯದರ್ಶಿ ಸಿರಾಜುದ್ದೀನ್ ಅಮ್ಮೆಂಬಳ ಸ್ವಾಗತಿಸಿದರು. ಅಮ್ಮೆಂಬಳ ದರ್ಗಾ ಖತೀಬ್ ಹಾಫಿಲ್ ಮುಈ ನುದ್ದೀನ್ ರಝ್ವಿ ಅಮ್ಜದಿ ಉಸ್ತಾದ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮಕ್ಕೆ ದ.ಕ ಜಿಲ್ಲಾ (ವೆಸ್ಟ್) ಅಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವು , ಫೈನಾನ್ಶಿಯಲ್ ಸೆಕ್ರೇಟರಿ ಇಕ್ಬಾಲ್ ಮಧ್ಯನಡ್ಕ ಬಂದು ರಕ್ತದಾನ ಮಾಡಿ ಶುಭ ಹಾರೈಸಿದರು. ಮುಡಿಪು ಡಿವಿಜನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿ ಉಸ್ತಾದ್ ಬ್ಲಡ್ ಸೈಬೋ ಮಾಡಿದ ಸೇವೆಯನ್ನು ವಿವರಿಸಿದರು. ಬ್ಲಡ್ ಸೈಬೋ ಉಸ್ತುವಾರಿ, ಮುನೀರ್ ಬೈತಾರ್, ಸೆಕ್ಟರ್ ಉಸ್ತುವಾರಿ ನಾಝಿಮ್ ಮೊಂಟೆಪದವು, ಮೀಡಿಯಾ ಕಾರ್ಯದರ್ಶಿ ಶರೀಫ್ ಪಾನೇಲ, ಸದಸ್ಯರಾದ ರಾಫೀ ಕಣ್ಣೂರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು ಮಲಾರ್,ಸದಸ್ಯರಾದ ಜಬ್ಬಾರ್ ಬೋಳಿಯಾರ್, ಕೇಂದ್ರ ಜುಮಾ ಮಸೀದಿ ಅಮ್ಮೆಂಬಳ ಇದರ ಅಧ್ಯಕ್ಷರಾದ ಉಬೈದ್ ಬಿ.ಎಚ್ ಬೋಳಿಯಾರ್ ಗ್ರಾಮ ಪಂಚಾಯತ್ ಉಪಧ್ಯಕ್ಷರಾದ ಶಕೂರ್, ಪಾವೂರು ಗ್ರಾಮ ಪಂಚಾಯತ್ ಉಪಧ್ಯಕ್ಷರಾದ ಅನ್ಸಾರ್ ಇನೋಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪಾನೇಲ ಜಮಾಅತ್ ಖತೀಬರಾದ ಅಬ್ಬಾಸ್ ಮದನಿ ಬಂಡಾಡಿ, ಅಧ್ಯಕ್ಷರಾದ ಯೂಸುಫ್ ಪಾನೇಲ, SYS ಅಮ್ಮೆಂಬಳ ಬ್ರಾಂಚ್ ಅಧ್ಯಕ್ಷರಾದ ಹನೀಫ್ BIT, ಪ್ರ ಕಾರ್ಯದರ್ಶಿ ರಫೀಕ್ ಕೋಟೆ,ಮಾಜಿ ಕಾರ್ಯದರ್ಶಿ RK ಮುಸ್ತಫಾ ಅಮ್ಮೆಂಬಳ,ಹಿರಿಯ ವ್ಯಕ್ತಿ ಅಬ್ದುಲ್ ಖಾದರ್ ಬಂಡೆಸಾಲೆ ಮತ್ತಿತ್ತರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರ ಕಾರ್ಯದರ್ಶಿ ಸಲ್ಮಾನ್ ಕುಕ್ಕುದಕಟ್ಟೆ,ಕಾರ್ಯದರ್ಶಿಗಳಾದ ಝಾಕಿರ್ ಪಾಲುಲಿ ಉಸ್ತಾದ್,ಜಬ್ಬಾರ್ ಬೋಳಿಯಾರ್,ಯಾಸೀನ್ ಮಧ್ಯನಡ್ಕ ಸಿರಾಜ್ ಪಾನೇಲ,ಜಾರದಗುಡ್ಡೆ ಶಾಖೆಯ ಅಧ್ಯಕ್ಷ ಶಮೀರ್ ಜಾರದಗುಡ್ಡೆ, ಅಮ್ಮೆಂಬಳ ಶಾಖೆಯ ಪ್ರ ಕಾರ್ಯಕರ್ಶಿ ಅನ್ವರ್ ಕೋಟೆ,ಫೈನಾನ್ಶಿಯಲ್ ಕಾರ್ಯದರ್ಶಿ ಶಮೀರ್ ಜೀ,ಕಾರ್ಯದರ್ಶಿ ನೌಫಲ್ ಕೋಟೆ ಕಾರ್ಯಕ್ರಮವನ್ನು ನಿಯಂತ್ರಿಸಿದರು. ಕ್ಯಾಂಪ್ ನ ನಡುವಲ್ಲಿ ಮೊನ್ನೆ ನಮ್ನನ್ನಗಲಿದ ಪಯಶ್ವಿ ಉಸ್ತಾದರ ಹೆಸರಲ್ಲಿ ತಹ್ಲೀಲ್ ಹೇಳಿ ದುಆ ಮಾಡಲಾಯಿತು..
– ತಂಜೀದ್ ಅಮ್ಮೆಂಬಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.