ಮದುವೆಯಾಗುವ ವಿಷಯ ತಿಳಿಸಿದಾಗ ತಲೆಸುತ್ತಿ ಬಿದ್ದ ಕೆಲಸಗಾರ..
(ವಿಶ್ವ ಕನ್ನಡಿಗ ನ್ಯೂಸ್) : ಪಾಕಿಸ್ತಾನದ ಶ್ರೀಮಂತ ಹಿರಿಯ ಮಹಿಳೆಯೊಬ್ಬರು ತಮ್ಮ ಕೆಲಸಗಾರನನ್ನು ಮದುವೆಯಾಗಿದ್ದಾರೆ. ಶ್ರೀಮಂತ ಹಿರಿಯ ಮಹಿಳೆ ಮದುವೆಯಾಗುವ ಬಗ್ಗೆ ಕೆಲಸಗಾರನಿಗೆ ತಿಳಿಸಿದಾಗ ಆತ ತಲೆಸುತ್ತಿ ಬಿದ್ದ ಘಟನೆ ನೆಡೆದಿದೆ. ಇವರ ಮದುವೆಯ ಸುದ್ದಿ ಈಗ ಎಲ್ಲ ಕಡೆಗಳಲ್ಲಿಯೂ ವೈರಲ್ ಆಗಿದೆ.
ಪ್ರೀತಿ ಕುರುಡು, ಪ್ರೀತಿಗೆ ಕಣ್ಣಿಲ್ಲ ಎಂಬ ಮಾತನ್ನು ಪಾಕಿಸ್ತಾನದ ಈ ಜೋಡಿಯ ಸಾಬೀತು ಮಾಡಿದೆ. ಇಸ್ಲಾಮಾಬಾದ್ ನಿವಾಸಿಯಾದ ನಾಜಿಯಾ ತನ್ನ ಕೆಲಸಗಾರನಾದ ಸೂಫಿಯಾನ್ ನನ್ನು ದಿನನಿತ್ಯದ ಮನೆಕೆಲಸಕ್ಕಾಗಿ ನೇಮಿಸಿ ತಿಂಗಳಿಗೆ 18,000 ರೂಪಾಯಿ ಸಂಬಳಕ್ಕೆ ನೀಡುತ್ತಿದ್ದರು. ಸೂಫಿಯಾನ್ ಅವರ ಸರಳತೆ ಮತ್ತು ಒಳ್ಳೆಯ ಸ್ವಭಾವದಿಂದ ಪ್ರಭಾವಿತರಾದ ನಾಜಿಯಾ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದರು.
ಮದುವೆಯ ವಿಷಯ ಮೊದಲಿಗೆ ಕೇಳಿದ ಸೂಫಿಯಾನ್ ಮೂರ್ಛೆ ತಪ್ಪಿ ಬಿದ್ದಿದ್ದರು ಎಂದು ಎಂದು ನಾಜಿಯಾ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.