(www.vknews.in) : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಆರನೇ ವಾರ್ಷಿಕೋತ್ಸವದ ಪ್ರಯುಕ್ತ ಹಲವಾರು ಜೀವಕ್ಕೆ ರಕ್ತವನ್ನು ಪೂರೈಸುವಂತಹ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಸದಸ್ಯರಾದ ಮರ್ಹೂಂ ಫಾಝಿಲ್ ಮಂಗಳಪೇಟೆ ರವರ ಸ್ಮರಣಾರ್ಥ ಜಿಲ್ಲೆಯ 4 ಕಡೆ ಏಕ ಕಾಲಕ್ಕೆ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರವು (ಬ್ಲಡ್ ಡೋನೇಷನ್ ಫಿಯೆಸ್ಟಾ – 2022) ದಿನಾಂಕ: 07/08/2022 ಆದಿತ್ಯವಾರ ಸಮಯ ಬೆಳಿಗ್ಗೆ 9:30 ರಿಂದ ಮದ್ಯಾಹ್ನ 1:30 ರವರೆಗೆ ಉಳ್ಳಾಲ, ಉಳಾಯಿಬೆಟ್ಟು, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಜೀವದಾನಿಯಾಗಲು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯು ಮನವಿ ಮಾಡಿದೆ.
ಪ್ರಕಟಣೆ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.