ಯೂಟ್ಯೂಬ್ನಲ್ಲಿ 1.5 M, ಫೇಸ್ಬುಕ್ನಲ್ಲಿ 2 M ಫಾಲೋವರ್ಸ್ ಹೊಂದಿರುವ ಗಾಯಕ..!
(ವಿಶ್ವ ಕನ್ನಡಿಗ ನ್ಯೂಸ್) : ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗಾಯಕನಿಗೆ ಪೊಲೀಸರು ಇನ್ನು ಮುಂದೆ ಹಾಡಬೇಡಿ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಬಾಂಗ್ಲಾದೇಶದ ಗಾಯಕ ಹೀರೋ ಅಲೋಮ್ಗೆ ಎಚ್ಚರಿಕೆ ನೀಡಿದ್ದಾರೆ. ಹೀರೋ ಅಲೋಮ್ ಯೂಟ್ಯೂಬ್ನಲ್ಲಿ 1.5 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 2 ಮಿಲಿಯನ್ ಫಾಲೋವರ್ಸ್ ಹೊಂದಿರುವ ವ್ಯಕ್ತಿ. ಅವರ ಹಾಡುಗಳ ಬಗ್ಗೆ ದೂರುಗಳು ಬಂದ ನಂತರ ಹಾಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ.
ಅವರು ರವೀಂದ್ರನಾಥ ಟ್ಯಾಗೋರ್ ಮತ್ತು ಬಾಂಗ್ಲಾದೇಶದ ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಶ್ರೇಷ್ಠ ಕವಿತೆಗಳನ್ನು ಕೆಟ್ಟದಾಗಿ ಮತ್ತು ವಿಕೃತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ತನಗೆ ಮಾನಸಿಕ ಹಿಂಸೆ ನೀಡಿದ್ದಾರೆ, ತಾನು ಗಾಯಕನಾಗಲು ಯೋಗ್ಯನಲ್ಲ ಎಂದು ಕ್ಷಮೆಯಾಚನೆಗೆ ಸಹಿ ಹಾಕಿಸಿದ್ದಾರೆ ಎಂದು ಹೀರೋ ಅಲೋಮ್ ಆರೋಪಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪೊಲೀಸರು ನನ್ನನ್ನು ಕರೆದುಕೊಂಡು ಹೋದರು. ಎಂಟು ಗಂಟೆಗಳ ಕಾಲ ನನ್ನನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಟ್ಯಾಗೋರ್ ಮತ್ತು ನಜ್ರುಲ್ ಅವರ ಕವಿತೆಗಳನ್ನು ಏಕೆ ಹಾಡುತ್ತಿಯಾ ಎಂದು ನನ್ನನ್ನು ಕೇಳಿದರು ಎಂದು ಎಎಫ್ಪಿಗೆ ನೀಡಿದ ಸಂದರ್ಶನದಲ್ಲಿ ಹೀರೋ ಅಲೋಮ್ ಹೇಳಿದ್ದಾರೆ. ಆದರೆ ಪೊಲೀಸರು ಆರೋಪವನ್ನು ನಿರಾಕರಿಸಿದ್ದಾರೆ. ಅವರ ಆರೋಪದ ಹಿಂದೆ ವೈರಲ್ ಆಗುವ ಪ್ರಯತ್ನವಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.