ಭಾರತದ ಸ್ವಾತಂತ್ರ್ಯದ ಪೋಸ್ಟರ್ ನಲ್ಲಿ ಅರಬಿಗಳ ಚಿತ್ರ ಯಾಕೆ? ; ನೆಟ್ಟಿಗರ ಪ್ರಶ್ನೆ..
ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಪೋಸ್ಟರ್ ನಲ್ಲಿ ಅರಬ್ ಕುಟುಂಬವೊಂದರ ಫೋಟೋವನ್ನು ಪ್ರಕಟಿಸಿ ಬಿಜೆಪಿ ಮುಜುಗರಕ್ಕೀಡಾಗಿದೆ. ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಬಿಜೆಪಿಯವರ ಪೋಸ್ಟರ್ ಗೆ ಪೋಸ್ ಕೊಡಲು ಭಾರತದಲ್ಲಿ ಒಂದೇ ಒಂದು ಸುಖೀ ಸಂಸಾರದ ಮುಸ್ಲಿಂ ಕುಟುಂಬ ಸಿಗಲಿಲ್ಲವೇ?, ಭಾರತದ ಸ್ವಾತಂತ್ರ್ಯದ ಅಭಿಯಾನದ ಪೋಸ್ಟರ್ ನಲ್ಲಿ ಅರಬಿಗಳ ಚಿತ್ರ ಯಾಕೆ?, ಬಿಜೆಪಿಗೆ ಅಲ್ಪಸಂಖ್ಯಾತ ಮೋರ್ಚಾ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕುಟುಂಬ ಸದಸ್ಯರ ಚಿತ್ರವೂ ಸಿಗಲಿಲ್ಲವೇ?, ಮೊದಲಾದ ಹಲವು ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕೇಳುತಿದ್ದಾರೆ. ಅಲ್ಲದೇ ಪ್ರಪಂಚದಾದ್ಯಂತ ಇರುವ ಭಾರತೀಯರಿಗೆ ಇದು ನಾಚಿಕೆಗೇಡಿನ ವಿಷಯ ಎಂದು ಪ್ರತಿಕ್ರಿಯಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.