ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕಳೆದ ಹಲವು ದಿನಗಳಿಂದ ಸಂಪಾಜೆ, ಕಲ್ಲುಗುಂಡಿ ಸ್ಥಳೀಯ ಪ್ರದೇಶಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಪ್ರದೇಶದ ಜನರ ಹಾಗೂ ಸಾರ್ವಜನಿಕ ಸೊತ್ತುಗಳ ರಕ್ಷಣೆ ಮತ್ತು ಸಹಾಯಕ್ಕೆ ನಿರಂತರವಾಗಿ ದಣಿವರಿಯದೆ ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ತುರ್ತು ಸೇವಾ ತಂಡ ಸುಳ್ಯ ಹರಸಾಹಸಪಟ್ಟು ಕಾರ್ಯಾಚರಣೆ ಮಾಡುತ್ತಿದೆ.
ತೀವ್ರ ಮಳೆಯ ಪರಿಣಾಮ ಕಲ್ಲುಗುಂಡಿ ಮಸೀದಿ ತಡೆಗೋಡೆ ಕಳಚಿ ಬಿದ್ದಿದ್ದು ಅದರ ಅವಶಿಷ್ಟಗಳನ್ನೂ, ಕಲ್ಲುಗಳನ್ನೂ ಬದಿಗಿಟ್ಟು ಸ್ಥಳ ಅಚ್ಚುಕಟ್ಟಾಗಿಡಲು ಸಹಕರಿಸಲಾಯಿತು. ಕಲ್ಲುಗುಂಡಿ ಬಾಲಂಬಿ ಸೇತುವೆಯಲ್ಲಿ ಸಿಲುಕಿದ್ದ ಭಾರೀ ಗಾತ್ರದ ಮರ ಮತ್ತು ಬಿದಿರುಗಳನ್ನು ತೆರವುಗೊಳಿಸಲು ಕಠಿಣವಾಗಿ ಕಾರ್ಯಾಚರಣೆ ನಡೆಸಿ ಕ್ರೈನ್ ಮುಖಾಂತರ ಬೃಹದಾಕಾರದ ಮರದ ದಿಮ್ಮಿಗಳನ್ನು ಮೇಲಕ್ಕೆತ್ತುವಲ್ಲಿ ಕಾರ್ಯಾಚರಿಸಲಾಯಿತು. ನೀರಿನಲ್ಲಿ ಬಂದ ಬಿದಿರುಗಳ ಸಹಿತವಿರುವ ಬಲ್ಲೆಗಳು ಸೇತುವೆಯ ನೀರು ಹೋಗುವ ದ್ವಾರವನ್ನು ಮುಚ್ಚಿದನ್ನು ಗಮನಿಸಿದ ಕಾರ್ಯಕರ್ತರು ಅವುಗಳನ್ನು ತೆರವುಗೊಳಿಸಿ ಶುಚೀಕರಿಸಿದರು.
ಕಲ್ಲುಗುಂಡಿಯಲ್ಲಿ ಸತತ ಐದನೇ ದಿನವೂ ಎಸ್ಸೆಸ್ಸಫ್ ಹಾಗೂ ಎಸ್ ವೈ ಎಸ್ ತುರ್ತು ಸೇವಾ ತಂಡದ ದಣಿವರಿಯದ ಕಾರ್ಯಕರ್ತರು ಕಾರ್ಯಾಚರಣೆಯಲ್ಲಿ ತೊಡಗಿಸಿದ್ದಾರೆ. ಈ ಕಾರ್ಯಾಚರಣೆಗೆ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಸಹಿತವಿರುವ ಜನಪ್ರತಿನಿಧಿಗಳು ಸಾಥ್ ಕೊಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಸಾರ್ವಜನಿಕರೂ ಕಾರ್ಯಕರ್ತರ ಶ್ರಮಧಾನ ವನ್ನು ಅಭಿನಂದಿಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.