ನೀ ಮೆಟ್ಟಿದ ನೆಲದಲಿ ಚಿಗುರಿದ ಮೊಗ್ಗುಗಳಿವು.. ಮನ ಕೊರೆದು ಬರೆದ ಕವನದ ಸಾಲುಗಳಿವು..
ನೀ ನುಡಿದ ಪದಗಳ ಸವಿಸ್ತಾರಗಳಿವು ನೀ ಬೆಸೆದ ಹೃದಯಗಳ ಮುತ್ತಿನ ಮಾತುಗಳಿವು..
ಈ ಹೃದಯದಿ ಪುಟಿದ ಹಳೆಯ ನೆನಪುಗಳಿವು ನಿನ್ನ ನೋಡಿದ ಕ್ಷಣದಿಂದ ಮೂಡಿದ ರಾಗಗಳಿವು
ಹಸಿರೆಲೆಯ ಕಾಡಿನಲಿ ಮೂಡಿದ ಸೊಗಸಾದ ಸಂಗೀತಗಳಿವು ಇಂಚರ ದ ಗೂಡಿನಲಿ ಹಾಡಿದ ನನ್ನ ಬಾಳಿನ ಹಾಡುಗಳಿವು..
ಕಣ್ಣ ಹನಿ ಜಾರಿದಾಗ ನೆನಪಿಸಿದ ನೋವುಗಳಿವು ಬರಿದಾದ ಬಾಳಿನಲಿ ಬೆಳಕಾದ ನೆನಪುಗಳಿವು..
✍🏻 ಶಮ್ಮಾಸ್, ಜೋಗಿಬೆಟ್ಟು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.