ಸಂಪಾಜೆ(ವಿಶ್ವಕನ್ನಡಿಗ ನ್ಯೂಸ್): ಕಲ್ಲುಗುಂಡಿ ಪ್ರದೇಶದಲ್ಲಿ ಉಂಟಾದ ಪ್ರವಾಹದಿಂದ ತೊಂದರೆಗೆ ಶೀಘ್ರವೇ ಸ್ಪಂದಿಸಿ ಕಾರ್ಯಾಚರಣೆ ನಡೆಸುತ್ತಿರುವ ಎಸ್ಸೆಸ್ಸಫ್, ಎಸ್ವೈಎಸ್ ತುರ್ತು ಸೇವಾ ತಂಡದೊಂದಿಗೆ ಸೇರಿ ಸಕ್ರೀಯವಾಗಿ ಸಾಮಾನ್ಯ ಕಾರ್ಯಕರ್ತ ನಂತೆ ಕಾರ್ಯಾಚರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಬ್ದುರ್ರಹ್ಮಾನ್ ಮೊಗರ್ಪಣೆ ಯವರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಾಯಕರಾದವರು ಸಾಮಾನ್ಯವಾಗಿ ಕಾರ್ಯಕರ್ತರಿಂದ ಕೆಲಸ ಮಾಡಿಸಿ ಪ್ರೋತ್ಸಾಹಿಸುವುದು ರೂಡಿ. ಆದರೆ ಅಬ್ದುರ್ರಹ್ಮಾನ್ ಮೊಗರ್ಪಣೆ ಯವರು ಮುಸ್ಲಿಂ ಜಮಾಅತ್ ರಾಜ್ಯ ನಾಯಕರೂ, ವಕ್ಫ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಹುದ್ದೆಯಲ್ಲಿದ್ದೂ ಕಾರ್ಯಾಚರಣೆ ನಡೆಸಿದ್ದು ನೋಡುವಾಗ ಅವರ ನಾಯಕತ್ವ ಗುಣವನ್ನು ಅರ್ಥೈಸಲು ಸಾಧ್ಯವಾಗುತ್ತದೆ. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ನೀರಿನಲ್ಲಿ ಮುಳುಗಿ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಹೆಗಲುಕೊಟ್ಟು ಬದಿಗೆ ಸೇರಿಸುವಲ್ಲಿ ಸಕ್ರೀಯವಾಗಿ ತೊಡಗಿಸಿದ ಅವರು ಎಲ್ಲಾ ನಾಯಕರಿಗೂ ಮಾದರಿಯಾಗಿದ್ದಾರೆ.
ಅವರ ಈ ಕಾರ್ಯಾಚರಣೆಗೆ ಎಸ್ಸೆಸ್ಸಫ್, ಎಸ್ವೈಎಸ್ ತುರ್ತು ಸೇವಾ ತಂಡವು ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.