ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಸಮಸ್ತ ಕೇರಳ ಜಂಇಯ್ಯತುಲ್ ಖುತಬಾ ಬೆಳ್ತಂಗಡಿ ವಲಯ ವತಿಯಿಂದ ಮೌಸಿಮುಲ್ ಹಿಜ್ರಾ ಕಾರ್ಯಕ್ರಮವನ್ನು “ಹಿಜ್ರಾದ ತಿರುಳು ಮುಹರ್ರಮಿನ ಹಿರಿಮೆ” ಎಂಬ ಪ್ರಮೇಯದಲ್ಲಿ ದಾರುಸ್ಸಲಾಂ ಇಸ್ಲಾಮಿಕ್ ಸೆಂಟರ್ ಬೆಳ್ತಂಗಡಿ ಕೋಶಾಧಿಕಾರಿ ಮುಹಮ್ಮದ್ ಅಶ್ರಫ್ ಫೈಝಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ದುಆ ಹಾಗೂ ಉದ್ಘಾಟನೆಯನ್ನು DIC ಇದರ ಪ್ರಾಂಶುಪಾಲರಾದ ಸಯ್ಯದ್ ತ್ವಾಹ ತಂಗಳ್ ನೆರವೇರಿಸಿದರು. ಹಿಜ್ರಾದ ಮಹತ್ವದ ಬಗ್ಗೆ ಜಂಇಯ್ಯತುಲ್ ಖುತಬಾ ಬೆಳ್ತಂಗಡಿ ವಲಯ ಇದರ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಅಶ್ರಫಿ ತರಗತಿ ನಡೆಸಿದರು.
ಮುಹಮ್ಮದ್ ನಿಯಾಝ್ ಫೈಝಿ ಕಾರ್ಯಕ್ರಮದಲ್ಲಿ ಖಿರಾಅತ್ ಪಠಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಜಂಇಯ್ಯತುಲ್ ಖುತಬಾ ಇದರ ಕೋಶಾಧಿಕಾರಿ ಶಂಸುದ್ದೀನ್ ದಾರಿಮಿ ಸ್ವಾಗತ ಭಾಷಣ ಮಾಡಿದರು.ಅಬ್ದುಲ್ಲಾ ನವಾಝ್ ಶರೀಫ್ ಫೈಝಿ, ಅಬ್ದುಸ್ಸಮದ್ ಬಾಖವಿ, ರಝಾಕ್ ಕನ್ನಡಿಕಟ್ಟೆ, ಹಬೀಬುಲ್ಲಾ ಬೆಳ್ತಂಗಡಿ ಇತರ ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.