ಸುಳ್ಯ (www.vknews.in) : ಇತ್ತೀಚಿಗೆ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ಹತ್ಯಾ ಪ್ರಕರಣದಲ್ಲಿ ಶಾಮೀಲಾದ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿರುವುದು ಸಂತಸದ ವಿಚಾರ ಈ ಕೃತ್ಯದ ಆರೋಪಿಗಳಲ್ಲಿ ನಮ್ಮ ಎಲಿಮಲೆ ಪ್ರದೇಶದ ಬಶೀರ್ ಎಂಬಾತನುಈ ಅಮಾನವೀಯ ಕೃತ್ಯದಲ್ಲಿ ಭಾಗಿಯಾಗಿರುವುದು ನಮ್ಮನ್ನೆಲ್ಲಾ ದಿಗ್ಬ್ರಮೆ ಗೊಳಿಸಿದೆ ಈ ಕುಕೃತ್ಯವನ್ನು ಎಲಿಮಲೆ ಬದ್ರಿಯಾ ಜಮಾತ್ ಸಮಿತಿಯು ತೀವ್ರವಾಗಿ ಕಟು ಶಬ್ದಗಳಿಂದ ಖಂಡಿಸುತ್ತದೆ.
ಇಸ್ಲಾಂ ಎಂದಿಗೂ ಶಾಂತಿಯ ಧರ್ಮವಾಗಿದ್ದು ಇಂತಹ ಕ್ರೂರ ಕೃತ್ಯವನ್ನು ಎಂದಿಗೂ ಒಪ್ಪುವುದಿಲ್ಲಅಲ್ಲದೇ ಯಾವ ಧರ್ಮವೂ ಇಂತಹ ಕೃತ್ಯವನ್ನು ಒಪ್ಪುವುದಿಲ್ಲ ಮತ್ತು ಬೆಂಬಲಿಸುವುದೂ ಇಲ್ಲ ಇಂತಹ ಅಮಾನವೀಯ ಕೃತ್ಯ ವೆಸಗಿದ ಆರೋಪಿಗಳನ್ನು ಮತ್ತು ಈ ಕೃತ್ಯಕ್ಕೆ ಕುಮ್ಮಕ್ಕು ನೀಡಿದವರನ್ನು ಕಾನೂನಿನಡಿ ಸೂಕ್ತ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ನೀಡಲು ಪೊಲೀಸ್ ಇಲಾಖೆಯನ್ನು ಮತ್ತು ನ್ಯಾಯಾಂಗವನ್ನು ನಮ್ಮ ಜಮಾಅತ್ ಸಮಿತಿಯು ಈಮೂಲಕ ಒತ್ತಾಯಿಸುತ್ತದೆ.
ಸಮಾಜದಲ್ಲಿ ಇಂತಹ ಕೃತ್ಯಗಳು ಮುಂದಕ್ಕೆ ನಡೆಯದಂತೆ ಹಾಗೂ ಶಾಂತಿ ಸೌಹಾರ್ದತೆ, ಸಹಬಾಳ್ವೆ ಮತ್ತು ಸಾಮರಸ್ಯತೆಯನ್ನು ಕಾಪಾಡಿಕೊಂಡು ಹೋಗುವರೇ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಬೇಕಾದ ಅಗತ್ಯತೆ ಇದ್ದು ಈ ನಿಟ್ಟಿನಲ್ಲಿ ನಮ್ಮ ಜಮಾತ್ ಸಮಿತಿಯು ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಎಲಿಮಲೆ ಮಸೀದಿಯ ಜಮಾತ್ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಎಲಿಮಲೆ ಯವರು ಪ್ರಸ್ತುತ ದೆಹಲಿಯಲ್ಲಿದ್ದು, ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.