ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಮನೆ ಮನೆಗಳಲ್ಲಿ ತಿರಂಗ ಧ್ವಜ ಹಾರಿಸಲು ಹೇಳಿದ ನರೇಂದ್ರ ಮೋದಿ ಹೇಳಿಕೆಗೆ ಯುವ ಕಾಂಗ್ರೆಸ್ ಮುಖಂಡ ಎಂ ತೌಫೀಕ್ ಚಾಟಿ ಬೀಸಿದ್ದಾರೆ.
ನರೇಂದ್ರ ಮೋದಿ ಅವರೇ ಮನೆ ಮನೆಗೂ ತಿರಂಗ ಧ್ವಜ ಹಾರಿಸಲು ನಮಗೆ ನಿಮ್ಮ ಆದೇಶ ಅಗತ್ಯ ಇಲ್ಲ ನಾವು 1947 ರಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ ಇನ್ನೂ ಮುಂದೆಯೂ ಆಚರಿಸುತ್ತೇವೆ.
ನೀವು ಬ್ರಿಟಿಷ್ ನಿಷ್ಠಾವಂತರಾಗಿ ವರ್ತಿಸಿದ್ದೀರಿ ಮತ್ತು ಭಾರತೀಯ ರಾಷ್ಟ್ರೀಯವಾದಿಗಳನ್ನು ಹೊಂದಿಲ್ಲ. ಭಾರತದ ಸ್ವಾತಂತ್ರ್ಯದಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ. ನೀವು ರಾಷ್ಟ್ರೀಯ ಮೌಲ್ಯಗಳು ಮತ್ತು ಚಿಹ್ನೆಗಳಿಗೆ ಯಾವುದೇ ಗೌರವವನ್ನು ತೋರಿಸಲಿಲ್ಲ. ಬ್ರಿಟಿಷರಿಗೆ ನಿಷ್ಠೆ ತೋರಿದವರು, ಸ್ವಾತಂತ್ರ್ಯ ಚಳವಳಿಯನ್ನು ಬಹಿಷ್ಕರಿಸಿದವರು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದವರು ಆರೆಸ್ಸೆಸ್ ಎಂದು ಬಿಜೆಪಿಗೆ ಸೌಮ್ಯವಾದ ಜ್ಞಾಪನೆ. ಆರ್ಎಸ್ಎಸ್ನ ಮೂಲತತ್ವವೇ ಭಾರತ ವಿರೋಧಿಯಾಗಿದೆ.
ಕಾಂಗ್ರೆಸ್ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಯುತ್ತಿದ್ದಾಗ, ಆರ್ಎಸ್ಎಸ್ ಅದನ್ನು ಬಹಿಷ್ಕರಿಸಿದ್ದು ಮಾತ್ರವಲ್ಲ ಬ್ರಿಟಿಷರಿಗೆ ಸಹಕಾರ ನೀಡಿತ್ತು. ನಾವು ನಿಮ್ಮ ಹಾಗೆ ಬ್ರಿಟಿಷ್ ಜೊತೆ ಕ್ಷಮೆ ಕೇಳಿ ಸಂಬಂಧ ಇಟ್ಟವರಲ್ಲ ಭಾರತ ದೇಶದ ಹೋರಾಟಗಾರರ ರಹಸ್ಯವನ್ನು ಬ್ರಿಟಿಷರಿಗೆ ಬಿಟ್ಟು ಕೊಟ್ಟು ಸಹಾಯ ಮಾಡಿದ ನೀವು, ಸ್ವಾತಂತ್ರ್ಯ ಆಚರಣೆ ಹಾಗೂ ಹೋರಾಟ ಮಾಡದವರು ನೀವು. ಭಾರತ ದೇಶದ ಸ್ವಾತಂತ್ರಕ್ಕೆ ಹೋರಾಡಿದವರು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಹಾಗೂ RSS ಅವರ ಒಂದೇ ಕೊಡುಗೆ ಇಲ್ಲದವರು ನೀವು ದೇಶ ಪ್ರೇಮ ಬಗ್ಗೆ ಮಾತನಾಡಲು ನಾಚಿಕೆ ಆಗಬೇಕು. ನೀವು ನಿಮ್ಮ ಸ್ವಯಂ ಸೇವಕ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲು ನಾವು ನಿಮಗೆ ಆದೇಶವನ್ನು ನೀಡುತ್ತೇವೆ ಎಂದು ತೌಫೀಕ್ ರವರು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.