(www.vknews.in) : ತಾ 13/08/2022 ಶನಿವಾರ ಪುತ್ತೂರು ರೋಟರಿ ಕ್ಲಬ್ ಸೆ೦ಟ್ರಲ್ ನಿಂದ ರೋಟರಿ ಜಿಲ್ಲಾ 3181 “ವನಸಿರಿ” ಯೋಜನೆಯಡಿ ಪುತ್ತೂರಿನಲ್ಲಿ ಆಯ್ದ ಸರಕಾರಿ ಶಾಲೆಗಳಲ್ಲಿ ತರಕಾರಿ ತೋಟ ನಿರ್ಮಿಸುವ ಯೋಜನೆಗೆ ಮುಂಡೂರು ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನ ಅದ್ಯಕ್ಷರು ಮಾತನಾಡಿ, ಈ ಮಹತ್ವದ ಯೋಜನೆಯು ಜಿಲ್ಲಾ ರೋಟರಿ 3181 ಈ ವರ್ಷದ “ವನಸಿರಿ” ಯೋಜನೆಯಾಗಿದೆ, ಈ ಪ್ರಯುಕ್ತ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನಿಂದ ಪುತ್ತೂರಿನಲ್ಲಿ ಆಯ್ದ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾವಯವ ತರಕಾರಿ ಬೆಳೆಯುವೂದಕ್ಕೆ ಪ್ರೋತ್ಸಾಹಕರ ವ್ಯವಸ್ತೆಯಾಗಿದ್ದು, ಪ್ರತೀ ಮಕ್ಕಳು ಸ್ವಂತ ಮನೆಯಲ್ಲೂ ತರಕಾರಿ ಬೆಳೆಯಲು ಪೂರಕ ವಾತಾವರಣ ನಿರ್ಮಾಣವಾಗಿ ಆರೋಗ್ಯವರ್ದಕ ತರಕಾರಿ ಬೆಳೆಯುವ ನಿಟ್ಟಿನಲ್ಲಿ ಮತ್ತು ಮಕ್ಕಳಿಗೆ ಶಾಲೆಯಲ್ಲಿ ಸಾವಯವ ತರಕಾರಿ ಬೆಳೆದು ಬಿಸಿಯೂಟಕ್ಕೂ ಉಪಕಾರಿಯಾಗಲು ಸಹಕಾರಿಯಾಗುವ ನಿಟ್ಟಿನಲ್ಲಿ, ಸರಕಾರಿ ಶಾಲೆಗಳಲ್ಲಿ ತರಕಾರಿ ತೋಟ ನಿರ್ಮಿಸಬೇಕೆಂಬ ಕರ್ನಾಟಕ ಸರಕಾರದ ಯೋಜನೆಗೂ ಬೆಂಬಲವಾಗಿಯೂ, ನಮ್ಮ ಯೋಜನೆಯಿಂದ ಮುಂದಿನ ದಿನದಲ್ಲಿ ತಾಲೂಕಿನ ಎಲ್ಲಾ ಸರಕಾರಿ ಮತ್ತು ಸರಕಾರೇತರ ಶಾಲೆಗಳೂ ಇಂತಹಾ ತರಕಾರಿ ತೋಟ ನಿರ್ಮಾಣ ಮಾಡುವಂತಾಗಲಿ ಎಂದರು.
ಮುಂಡೂರು ಶಾಲಾ ಎಸ್.ಡಿ.ಎಮ್.ಸಿ ಅದ್ಯಕ್ಷರಾದ ರಮೇಶ್ ಗೌಡ ಪಜಿಮಣ್ಣು ಮಾತನಾಡಿ ಇಂತಹಾ ಒಂದು ಕೈ ತೋಟದ ಯೋಜನೆಯನ್ನು ಶಾಲೆಯಲ್ಲಿ ನಿರ್ಮಿಸಬೇಕೆಂದು ಕೊಂಡ ಸಂದರ್ಭದಲ್ಲಿ ನಮ್ಮ ಶಾಲೆಯನ್ನು ಅರಸಿಕೊಂಡು ರೋಟರಿ ಕ್ಲಬ್ ಸೆ0ಟ್ರಲ್ ನವರು ಬಂದದ್ದು ನಮಗೆ ಶಕ್ತಿ ತುಂಬಿದಂತಾಗಿದೆ, ಈ ಯೋಜನೆ ನಮ್ಮ ಶಾಲೆಯಿಂದಲೇ ಪ್ರಾರಂಬಿಸಿದ ರೋಟರಿ ಸೆ೦ಟ್ರಲ್ ನವರಿಗೆ ಅಭಿನಂದನೆ ಸಲ್ಲಿಸಿದರು.
ಶಾಲಾ ಮುಖೋಪಾದ್ಯಾಯರಾದ ಶ್ರೀಮತಿ ವಿಜಯಾ ಪಿ ಎಲ್ಲರನ್ನೂ ಸ್ವಾಗತಿಸಿ, ಮಾತನಾಡಿ ಮಕ್ಕಳಿಗೆ ಪೂರಕವಾದ ಈ ವ್ಯವಸ್ತೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಸ್ಪೂರ್ತಿ ತುಂಬುವ ವ್ಯವಸ್ತೆಯಾಗಿದೆ, ಈ ನಿಟ್ಟಿನಲ್ಲಿ ರೋಟರಿ ಸೆ೦ಟಲ್ ಗೆ ಅಭಿನಂದಿಸಿದರು.
ರೋಟರಿ ಕ್ಲಬ್ ಸೆ೦ಟ್ರಲ್ ನ ಉಪಾದ್ಯಕ್ಷರೂ ಸೆ೦ಟ್ರಲ್ ತರಕಾರಿ ತೋಟ ಯೋಜನೆಯ ಸ೦ಯೋಜಕರಾದ ರೋ ಅಶೋಕ್ ನಾಯ್ಕ ಕೆದಿಲ ಮಾತನಾಡಿ ಈ ಯೋಜನೆಯು ಬಿಸಿಯೂಟಕ್ಕೆ ಪೂರಕವಾದ ಯೋಜನೆಯಾಗಿದ್ದು ಪ್ರಸಕ್ತ ಸನ್ನಿವೇಶದಲ್ಲಿ ಸಾವಯವ ತರಕಾರಿ ಸಿಗದೇ ಇದ್ದು ವಿಷಯುಕ್ತ ತರಕಾರಿಗಳು ಮಾರುಕಟ್ಥೆಯಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದು, ಇದರಿಂದ ಮಕ್ಕಳ ಆರೋಗ್ಯದಲ್ಲೂ ವ್ಯತೀರಿಕ್ತ ಪರಿಣಾಮ ಬೀಳುತ್ತದೆ ಮಕ್ಕಳ ಆರೋಗ್ಯಕ್ಕೆ ಕೂಡ ಹಾನಿಕರ ಈ ನಿಟ್ಥಿನಲ್ಲಿ ನಮ್ಮ ರೋಟರಿ ಸೆ೦ಟ್ರಲ್ ಕ್ಲಬ್ ಸರಕಾರಿ ಶಾಲೆಯನ್ನು ಆಯ್ದುಕೊಂಡಿದ್ದು ಇದನ್ನ ನಾವು ವ್ಯವಸ್ತೆ ಮಾಡಿ ಕೊಡುವಾಗ ಸರಿಯಾಗಿ ಕಾಲಕ್ಕೆ ತಕ್ಕ ನೀರು ಹಾಕಿ ಪೋಶಿಸಬೇಕಾದದ್ದು ನಿಮ್ಮೆಲ್ಲರ ಕರ್ತವ್ಯ. ನಿರ್ವಹಿಸುವವರು ಉತ್ತಮ ರೀತಿಯಲ್ಲಿ ಪೋಶಿಸಲು ಮನವಿ ಮಾಡಿದರು.
ಕಾಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾದ್ಯಕ್ಷರಾದ ವೀಣಾ, ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ “ಕ್ಲಬ್ ಸರ್ವಿಸ್ ಡೈರೆಕ್ಟರ್” ಅಶ್ರಫ಼್ ಮುಕ್ವೆ, ಬಾಲಕೃಷ್ಣ ನಾಯ್ಕ ನಿಡ್ಪಲ್ಲಿ, ಶಾಲಾ ಅದ್ಯಾಪಕರುಗಳು, ಪೋಷಕರು, ವಿದ್ಯಾರ್ಥಿಗಳು ಸಹಕರಿಸಿದರು.
ಸಹಶಿಕ್ಷಕಿ ಶಶಿಕಲಾ ಟಿ ದನ್ಯವಾದ ಸಮರ್ಪಿಸಿದರು. ಶಾಲಾ ಸಹ ಶಿಕ್ಷಕ ಅಬ್ದುಲ್ ಬಷೀರ್ ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.