ಅಡೆಕ್ಕಲ್(ವಿಶ್ವಕನ್ನಡಿಗ ನ್ಯೂಸ್): ಮಸ್ಜಿದುಲ್ ಬದ್ರಿಯಾ ಅಡೆಕ್ಕಲ್ ನಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಸ್ಥೆಯ ಅದ್ದೆಕ್ಷರಾದ ಆದಂ ಕಳಂಬೊಟು ಹಾಗು ಖತೀಬ್ ಉಸ್ತಾದ್ ರಿಯಾಜ್ ದಾರಿಮಿ ಇವರ ಅದ್ದೆಕ್ಷೆಯಲ್ಲಿ ನಡೆಯಿತು.
ಮಸೀದಿಯ ಕಾರ್ಯದರ್ಶಿ ಸುಲೈಮಾನ್ ನಾಗನಕೊಡಿ ಸ್ವಾಗತ ಭಾಷಣದ ಮೂಲಕ ಸರ್ವರನ್ನು ಅಭಿನಂದಿಸಿದರು. ಧ್ವಜಾರೋಹಣವನ್ನು ಊರಿನ ಹಿರಿಯ ವ್ಯಕ್ತಿ ಸುಲೈಮಾನ್ ಅಡೆಕ್ಕಲ್ ರವರು ನೆರವೇರಿಸಿದರು, ಮದ್ರಸ ವಿದ್ಯಾರ್ಥಿನಿಗಳಿಂದ ರಾಷ್ಟ್ರಗೀತೆ ಹಾಡಿದರು.
ಖತೀಬ್ ಉಸ್ತಾದ್ ರಿಯಾಜ್ ದಾರಿಮಿ ಸ್ವಾತಂತ್ರ್ಯ ದ ಅಮೃತಾ ಮಹೋತ್ಸವದ ಕುರಿತು ವಿವರಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ಹಯಾತುಲ್ ಇಸ್ಲಾಂ ಮದ್ರಸ ಇದರ ಪ್ರಧಾನ ಅಧ್ಯಾಪಕರಾದ ಇಲ್ಯಾಸ್ ದಾರಿಮಿ,ಸಹ ಅಧ್ಯಾಪಕರಾದ ಅಬ್ದುರಹ್ಮಾನ್ ಮುಸ್ಲಿಯಾರ್, ಬಿ.ಟಿ ಇಕ್ಬಾಲ್ ದಾರಿಮಿ, ಆಡಳಿತ ಕಮಿಟಿಯ ಪದಾಧಿಕಾರಿಗಳು,
ಅನ್ಸಾರುಲ್ ಹುದಾ ಯೆಂಗ್ ಮೆನ್ಸ್ ಇದರ ಪದಾಧಿಕಾರಿಗಳು, ಯಸ್. ಕೆ. ಯಸ್. ಯಸ್. ಎಫ್ ಇದರ ಪದಾಧಿಕಾರಿಗಳು, ಯಸ್. ಕೆ. ಯಸ್. ಬಿ. ವಿ ಇದರ ಪದಾಧಿಕಾರಿಗಳು, ಹಾಗು ಜಮಾತಿನ ಹಿರಿಯ, ಕಿರಿಯ ವಿದ್ಯಾರ್ಥಿ, ವಿದ್ಯಾರ್ಥಿನಿ, ಪುಟಾಣಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.