ಪೇರಡ್ಕ(ವಿಶ್ವಕನ್ನಡಿಗ ನ್ಯೂಸ್): 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷರಾದ ಜನಾಬ್ ಎಸ್.ಆಲಿ ಹಾಜಿಯವರು ನೆರವೇರಿಸಿದರು. ಖತೀಬರಾದ ಬಹು ರಿಯಾಝ್ ಪೈಝಿ ಉಸ್ತಾದರು ದು:ವಾ ನೆರವೇರಿಸಿದರು.
ಸಭಾ ಕಾರ್ಯಕ್ರಮವು ಅಧ್ಯಕ್ಷರಾದ ಜನಾಬ್ ಎಸ್.ಅಲಿ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು ಅಧ್ಯಾಪಕರಾದ ಬಹು ನೂರುದ್ದೀನ್ ಅನ್ಸಾರಿ ಉಸ್ತಾದರು ಬಂದಿರುವ ಎಲ್ಲರನ್ನೂ ಸ್ವಾಗತಿಸಿದರು ಸಹ ಅಧ್ಯಾಪಕರಾದ ಬಹು ಹಂಝ ಉಸ್ತಾದರು ಉದ್ಘಾಟಿಸಿದರು ಖತೀಬರಾದ ಬಹು ರಿಯಾಝ್ ಫೈಝಿ ಉಸ್ತಾದರು ಸ್ವಾತಂತ್ರೋತ್ಸವದ ಸಂದೇಶ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ನಮ್ಮ ಜಮಾಅತ್ ನ ಸದಸ್ಯರಾದ ಸೈನಿಕರಾದ ಜನಾಬ್ ಪಿ ಎಂ ಅನ್ವರ್ ತೆಕ್ಕಿಲ್ ರವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿದ ಅನ್ವರ್ ತೆಕ್ಕಿಲ್ ರವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮಾತನಾಡಿದರು. ನೆರೆದಿರುವ ಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು.ಈ ಸಂದರ್ಭ ಜಮಾಅತ್ ಕಮಿಟಿಯ ಪದಾಧಿಕಾರಿಗಳು,SKSSF ಪದಾಧಿಕಾರಿಗಳು ,SKSBV ಪದಾಧಿಕಾರಿಗಳು, ಜಮಾಅತ್ ಸದಸ್ಯರುಗಳು, ತೆಕ್ಕಿ ಲ್ ಮೊಹಮ್ಮದ್ ಹಾಜಿ ಸ್ಮಾರಕ ತಖ್ವಿಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿ ಗಳು,ವಿದ್ಯಾರ್ಥಿನಿಯರು ಭಾಗವಹಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.