(ವಿಶ್ವ ಕನ್ನಡಿಗ ನ್ಯೂಸ್) : ದೇಶದಲ್ಲಿ ಹಿಂದು, ಮುಸ್ಲಿಮರು ಅದರಲ್ಲೂ ಪೂಜಾರಿಗಳು ಯಾಕೆ ಗಲಾಟೆ ಮಾಡಿ ಸಾಯುತ್ತಾರೆ ಎಂದು ಅರ್ಥ ಆಗ್ತಾಇಲ್ಲ, ನಿಜವಾಗಿಯೂ ಮುಸ್ಲಿಮರು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಕ್ರೈಸ್ತರಿಗೂ ಹಿಂದುಗಳಿಗೂ ಯಾವುದೇ ಗಲಾಟೆ ಆಗುತ್ತಿಲ್ಲ ಎಂದು ಹಿರಿಯರಾದ ಸಾಹುಕಾರ ರಾಜಣ್ಣ ಪೂಜಾರಿ ಹೇಳಿದರು.
ಇತ್ತೀಚಿಗೆ ಕಾಶಿಪಟ್ಣದ ದಾರುನ್ನೂರು ಶಿಕ್ಷಣ ಸಂಸ್ಥೆಯ ಅಂಗಳದಲ್ಲಿ ನಡೆದ ಎಸ್ಕೆಎಸ್ಸೆಸ್ಸೆಪ್ ಮೂಡಬಿದ್ರೆ ವಲಯ ಆಯೋಜಿಸಿದ್ದ ಪ್ರೀಡಂ ಸ್ಕ್ವಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಸ್ಲಿಮರು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಕ್ರೈಸ್ತರಿಗೂ ಹಿಂದುಗಳಿಗೂ ಯಾವುದೇ ಗಲಾಟೆ ಆಗುತ್ತಿಲ್ಲ. ಇದೆಲ್ಲಾ ಕೆಲವೇ ಕೆಲವರ ರಾಜಕೀಯ ಸ್ವಾರ್ಥಕ್ಕಾಗಿ ನಡೆಯುವ ಆಟ. ಬೆಳಗ್ಗಿನ ಅಧಾನ್ ನಿಲ್ಲಿಸಿದ್ದು ನಮಗೆಲ್ಲಾ ಬಹಳ ದುಖ ತಂದಿದೆ. ಸ್ಥಳೀಯವಾಗಿ ಯಾವ ಹಿಂದುಗಳಿಗೆ ಅಧಾನ್ ಕೊಡುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ.
ಕಾನೂನಿನ ಸಮಸ್ಯೆ ಇಲ್ಲದಿದ್ದರೆ ಇಲ್ಲಿನ ಮಸೀದಿಯಲ್ಲಿ ಅಧಾನ್ ಕೊಡುವುದಕ್ಕೆ ನಮ್ಮ ಯಾವ ವಿರೋಧವೂ ಇರುವುದಿಲ್ಲ. ಬೆಳಗ್ಗಿನ ಅಧಾನ್ ಇಲ್ಲದ ಕಾರಣ ನಮಗೇ ಈಗ ತೊಂದರೆಯಾಗಿದೆ. ಬೆಳ್ಳಂಬೆಳಗ್ಗೆ ಬಾಂಗ್ ದ್ವನಿ ಕೇಳಿ ಎದ್ದೇಳುತ್ತಿದ್ದೆವು ಎಂದು ಬಹಳ ಬಾವುಕರಾಗಿ ನುಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.