(www.vknews.in) ಮಂಜೇಶ್ವರ. ಉದ್ಯಾವರ ಮಾಡ ಕಿರಿಯ ಪ್ರಾಥಮಿಕ ಶಾಲೆ ಜಿ ಎಲ್ ಪಿ ಯಸ್ ಕುಂಜತ್ತೂರು ಇದರ ವತಿಯಿಂದ ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಶ್ರೀ ರಾಧಾಕ್ರಷ್ಣ ರವರು ಧ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಪಿ ಟಿ ಎ ಸಮಿತಿ ಪದಾಧಿಕಾರಿಗಳು,ಊರ ಗಣ್ಯರು ವಿವಿಧ ಸಂಘ ಸಂಸ್ಥೆಗಳ ನಾಯಕರು ಉಪಸ್ಥಿತರಿದ್ದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಮುಖ ಸಮಾಜ ಸೇವಕ ಶ್ರೀ ಹರೀಶ್ ಮಾಡ ನಿರ್ವಹಿಸಿದರು. ಹಿರಿಯ ಸಾಮಾಜಿಕ ನಾಯಕರಾದ ಶ್ರೀ ಇ. ಶಂಬು ನಂಬೂದಿರಿ ಮಾಡ, ಪೂರ್ವ ವಿದ್ಯಾರ್ಥಿ ಎಸ್.ಎಂ. ಬಶೀರ್ ಅಹಮ್ಮದ್ ಮಂಜೇಶ್ವರ,ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷರಾದ ನೀಲಾಧರ ಮಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಶಿಕ್ಷಕಿ ಶೀಬಾ ರೋಸ್ ಟಿ ಹಾಗೂ ಶಿಕ್ಷಕಿಯರಾದ ಸುಚಿತ್ರ, ರವರು ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಹ್ಮದ್ ಮೌಲಾನಾ ರೋಡು ರವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿ ಗಳಾದ ಇಬ್ರಾಹಿಂ ಇರ್ಷಾದ್ ನಗರ್ ನಾಸಿರ್ ಆರ್ ವಾರ್, ಪುತ್ತು ತೂಮಿನಾಡು ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿಯರಾದ ಪೂರ್ಣಿಮಾ, ಸಾಹಿರಾ, ಮರಿಯಮ್ಮ ವಾಲ್ಫಾ. ನಸೀಮಾ. ಫಾಯಿಝ ಹಾಗೂ ರಕ್ಷಕರು, ವಿದ್ಯಾರ್ಥಿಗಳು ಊರವರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಾಲಾ ಮುಖ್ಯೋಪಾ ಧ್ಯಾಯರಾದ ಶ್ರೀ ರಾಧಾ ಕ್ರಷ್ಣರವರು ಸ್ವಾಗತಿಸಿ ಶೀಜ ಟೀಚರ್ ಧನ್ಯವಾದವಿತ್ತರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.