(www.vknews.in)ಮಂಚಿ, ಕೊಳ್ನಾಡು: ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವದ ಪ್ರಯುಕ್ತ ರಿಫಾಯಿಯ್ಯ ಜುಮಾ ಮಸೀದಿ ಹಾಗು ಹಿಮಾಯತುಲ್ ಇಸ್ಲಾಂ ಮದರಸ ವತಿಯಿಂದ ಸಂಭ್ರಮ, ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು 2022 ಆಗಸ್ಟ್ 15 ಸೋಮವಾರ ಬೆಳಿಗ್ಗೆ 8 ಗಂಟೆಗೆ RJM ಮಸೀದಿ ಅಧ್ಯಕ್ಷರಾದ ಜ:ಸುಲೈಮಾನ್ ಸರಿತ್ ರವರ ಅಧ್ಯಕ್ಷತೆಯಲ್ಲಿ RJM ಮಸೀದಿ ವಠಾರದಲ್ಲಿ ನಡೆಯಿತು.
ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಅಧ್ಯಕ್ಷರು ಧ್ವಜಾರೋಹಣ ಗೈದರು. ಬಹು: ಅಬ್ದುಲ್ ರಝಾಕ್ ಸಖಾಫಿ ಸ್ಥಳೀಯ ಖತೀಬ್ ರವರು ದುಆಕ್ಕೆ ನೇತೃತ್ವ ನೀಡಿ ಸಂದೇಶ ಭಾಷಣ ಮಾಡಿದರು.ಅಮೃತ ಮಹೋತ್ಸವದ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗೆ ನಡೆಸಿದ ಚಿತ್ರ ಕಲೆ, ಕ್ವಿಜ್, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.ಈ ಸಮಾರಂಭದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಇಬ್ರಾಹಿಂ ಕೋಕಳ,ಪ್ರ.ಕಾರ್ಯದರ್ಶಿ ಸಿ.ಎಚ್.ಇಸ್ಮಾಯಿಲ್,ಕೊಶಾಧಿಕಾರಿ ಸಿ.ಎಚ್ ಮ್ಯೊದೀನ್,ಉಲಮಾ ನಾಯಕರಾದ ಎಣ್ಮೂರು ಲತೀಫಿ, ಮುಹಮ್ಮದ್ ಹಾಜಿ ನಾಡಾಜೆ, ಅಬ್ದುಲ್ ರವೂಫ್ ಹನೀಫಿ ಮಂಚಿ,ಕೋಕಳ , ಕಮಿಟಿಯ ಸದಸ್ಯರು ಹಾಗೂ ಊರಿನ ಹಲವಾರು ಗಣ್ಯ ವ್ಯಕ್ತಿಗಳು,ಮದರಸ ವಿದ್ಯಾರ್ಥಿ, ವಿದ್ಯಾರ್ಥಿನಿಗಳು ಭಾಗವಹಿಸಿದ್ದರು.ಮದಸ ಸದರ್ ಮುಅಲ್ಲಿಂ ಅಬ್ದುಲ್ ಹಕೀಂ ಹನೀಫಿ ಸ್ವಾಗತಿಸಿದರೆ, ಮುಅಲ್ಲಿಂ ಅಬ್ದುಲ್ ರಝಾಕ್ ಹನೀಫಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.