ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ಎರಡು ದಿನಗಳ ಮೊದಲು ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟು ಅಧಿಕೃತವಾಗಿ ಮುಸ್ಲಿಂ ಧರ್ಮಕ್ಕೆ ಮತಾ೦ತರವಾಗಿದ್ದ ಓ೦ಕಾರೇಶ್ಚರ ದೇವಸ್ಮಾನದ ಅರ್ಚಕರಾಗಿದ್ದ ಎಚ್.ಆರ್.ಚ೦ದ್ರಶೇಖರಯ್ಯ ಎಂಬವರು ಸಕ್ಕರೆ ಕಾಯಿಲೆ ಇರುವುದರಿ೦ದ ನನಗೆ ಮುಂಜಿ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದು ಹೇಳಿ ಹಿ೦ದೂ ಧರ್ಮಕ್ಕೆ ಮರಳಿರುವ ಘಟನೆ ತುಮಕೂರಿನ ಹಿರೇಹಳ್ಳಿಯಲ್ಲಿ ನಡೆದಿದೆ.
ಆಗಸ್ಟ್ 18 ರಂದು ಹಿರೇಹಳ್ಳಿ ಗ್ರಾಮದ ಓ೦ಕಾರೇಶ್ಚರ ದೇವಸ್ಮಾನದ ಅರ್ಚಕರಾಗಿದ್ದ ಎಚ್.ಆರ್.ಚ೦ದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎ೦ದು ಹೆಸರು ಬದಲಿಸಿಕೊ೦ಡು, ಪತ್ರಿಕೆಯಲ್ಲಿ ಸ್ವ-ಇಚ್ಮೆಯಿ೦ದ ಇಸ್ಲಾಂ ಧರ್ಮಕ್ಕೆ ಮತಾ೦ತರವಾಗುತ್ತಿದ್ದೇನೆ ಎಂದು ಪ್ರಕಟಣೆ ಕೊಟ್ಟು ಮುಸ್ಲಿಂ ಧರ್ಮಕ್ಕೆ ಮತಾ೦ತರಗೊಂ೦ಡಿದ್ದರು. ಇದೀಗ ಅವರು ಹಿಂದೂ ಧರ್ಮಕ್ಕೆ ಮರಳಿದ್ದಾರೆ.
ಸಕ್ಕರೆ ಕಾಯಿಲೆ ಇರುವುದರಿ೦ದ ನನಗೆ ಮುಂಜಿ ಮಾಡಿಸಿಕೊಳ್ಳಲು ಆಗುವುದಿಲ್ಲ. ಮು೦ಜಿ ಮಾಡಿದರೆ ಮಾತ್ರ ಮುಸ್ಲಿಮರಲ್ಲಿ ಸರಿಯಾಗಿ ಶವ ಸ೦ಸ್ಕಾರ ಮಾಡುವುದು ಹೀಗಾಗಿ ನಾನು ಹಿಂದೂ ಧರ್ಮಕ್ಕೆ ಮರಳುತ್ತಿದ್ದೇನೆ ಎಂದು ಚ೦ದ್ರಶೇಖರಯ್ಯ ಅವರು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.