ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ವಾಟ್ಸಪ್ ಸ್ಟೇಟಸ್ ಬದಲಿಸುವ ವಿಚಾರದಲ್ಲಿ ತಂಡವೊಂದು ಮನೆಗೆ ನುಗ್ಗಿ ಯುವಕನೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾದ ಸಂದರ್ಭದಲ್ಲಿ 45 ವರ್ಷದ ತಂದೆ ಜೀವದ ಹಂಗು ತೊರೆದು ಸೆಣಸಾಡಿ ಪುತ್ರನ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯ ಮಹದೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು, ಏಕಾಏಕಿ ಕೆಲ ದುಷ್ಕರ್ಮಿಗಳು ಮನೆಗೇ ನುಗ್ಗಿ ಪುತ್ರ ಅಕ್ಷಯ್ (18)ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾದಾಗ ದೃತಿಗೆಡದ 45 ವರ್ಷದ ಆನಂದ್ ರಾವ್ ದುಷ್ಕರ್ಮಿಗಳ ವಿರುದ್ಧ ಸೆಣಸಾಡಿದ್ದಾರೆ. ಅಲ್ಲದೆ ಪುತ್ರ ಬಲಿಯಾಗುವುದನ್ನು ತಡೆದಿದ್ದಾರೆ. ತಂದೆಯ ಸಾಹಸಕ್ಕೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳಾದ ಹರ್ಷ, ಸುಮಂತ್, ಗಣೇಶ್ ಮತ್ತು ಶ್ರೀಕಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.