ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಚಾಮರಾಜಪೇಟೆಯಲ್ಲಿ ಹೆತ್ತವರು ತನ್ನನ್ನು ಶಾಪಿಂಗ್ಗೆ ಕರೆದುಕೊಂಡು ಹೋಗಿಲ್ಲ ಎಂಬ ಕಾರಣಕ್ಕೆ 11 ವರ್ಷದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ಇಂದಿನ ಕಾಲದಲ್ಲಿ ಮಕ್ಕಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ, ಬೆಳೆಸಬೇಕಾದ ಪರಿಸ್ಥಿತಿಯಲ್ಲಿ ಪೋಷಕರಿದ್ದಾರೆ.
ಐದನೇ ತರಗತಿ ಓದುತ್ತಿದ್ದ 11ವರ್ಷ ವಯಸ್ಸಿನ ವೈಶಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಹಬ್ಬದ ಹಿನ್ನಲೆಯಲ್ಲಿ ಬಟ್ಟೆ ಖರೀದಿಗೆ ಪೋಷಕರು ಹೋಗುವಾಗ ವೈಶಾಲಿಗೆ ಕೆಲವು ದಿನಗಳ ಹಿಂದಷ್ಟೇ ಹೊಸ ಡ್ರಸ್ ಕೊಡಿಸಿದ್ದ ಕಾರಣ ಮತ್ತೊಮ್ಮೆ ಹೊಸ ಬಟ್ಟೆ ಬೇಡ ಎಂದು ವೈಶಾಲಿಯನ್ನು ಮನೆಯಲ್ಲೆ ಬಿಟ್ಟು, ಇನ್ನು ಇಬ್ಬರು ಮಕ್ಕಳನ್ನು ಕರೆದುಕೊಂಡು ಶಾಪಿಂಗ್ಗೆ ಹೋಗಿದ್ದರು. ಇದರಿಂದ ಮನನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ವೈಶಾಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಶಾಪಿಂಗ್ ಮುಗಿಸಿ ಬಂದ ಪೋಷಕರು ಮನೆಯ ಬಾಗಿಲನ್ನು ತೆರೆಯುವಂತೆ ವೈಶಾಲಿಗೆ ಸೂಚಿಸಿದರೂ ಬಾಗಿಲು ತೆರೆಯಲಿಲ್ಲ. ಆ ಬಳಿಕ ಆಕೆ ನೇಣುಬಿಗಿದುಕೊಂಡಿರುವುದು ಕಿಟಕಿ ಮೂಲಕ ತಿಳಿದುಬಂದಿದೆ. ತಕ್ಷಣವೇ ಬಾಗಿಲು ತೆರೆದು ನೋಡಿದರೆ ವೈಶಾಲಿ ಸಾವನ್ನಪ್ಪಿದ್ದಳು. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.