ಜಿದ್ದಾ (www.vknews.in) : ಇಂಡಿಯಾ ಫ್ರೆಟರ್ನಿಟಿ ಫೋರಂ ವತಿಯಿಂದ ಒಂದು ತಿಂಗಳ ಕಾಲ ನಡೆಯಲಿರುವ ಫ್ರೆಟರ್ನಿಟಿ ಪೆಸ್ಟ್ ಕಾರ್ಯಕ್ರಮಕ್ಕೆ ಸಪ್ಟೆಂಬರ್ 1ರಂದು ಚಾಲನೆ ನೀಡಲಾಗುವುದು ಎಂದು ಜಿದ್ಧಾದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ನಾಯಕರು ತಿಳಿಸಿದ್ದಾರೆ.
ಕೊವಿಡ್ ಮಹಾಮಾರಿಯು ಹೆಚ್ಚಿನ ಅನಿವಾಸಿಗಳಲ್ಲಿ ಮಾನಸಿಕ ಮತ್ತು ಶಾರೀರಿಕ ಪರಿಣಾಮಗಳನ್ನು ಬೀರಿದೆ. ಅನಿವಾಸಿಗಳಲ್ಲಿ ಎಲ್ಲಾ ರೀತಿಯ ಸವಾಲುಗಳನ್ನೆದುರಿಸಿ ಆತ್ಮವಿಶ್ವಾಸ ಹೆಚ್ಚಿಸಲು ಫ್ರೆಟರ್ನಿಟಿ ಪೆಸ್ಟ್ ಸಹಕಾರಿಯಾಗಲಿದೆ.
ಫ್ರೆಟರ್ನಿಟಿ ಫೆಸ್ಟ್ ಅಂಗವಾಗಿ ಇಂಡಿಯಾ ಫ್ರೆಟರ್ನಿಟಿ ಫೋರಂ ಜಿದ್ದಾ ಕರ್ನಾಟಕ ಚಾಪ್ಟರ್ ವತಿಯಿಂದ ಸಪ್ಟಂಬರ್ 2ರಂದು ತಾಯಿಫ್ ನಲ್ಲಿ ಕ್ರೀಡಾಕೂಟದ ಮೂಲಕ ಆರಂಭಗೊಂಡು ಸಪ್ಟಂಬರ್ 16ರಂದು ಜಿದ್ಧಾದಲ್ಲಿ ಕ್ರೀಡೋತ್ಸವ, ಸಪ್ಟಂಬರ್ 22ರಂದು ಮದೀನಾದಲ್ಲಿ ಪ್ಯಾಮಿಲಿ ಮುಲಾಖತ್, ಸಪ್ಟಂಬರ್ 30ರಂದು ಮಕ್ಕಾದಲ್ಲಿ ಪಿರ್ಸಪ್ಪಾಡ್ ಮತ್ತು ಅಕ್ಟೋಬರ್ 13ರಂದು ಜಿದ್ದಾದಲ್ಲಿ ಸಂಭ್ರಮ ಕಾರ್ಯಕ್ರಮ ಸೇರಿದಂತೆ ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದರು.
ಸಂಘಟನೆಯ ಜಿದ್ದಾ ಪ್ರಾದೇಶಿಕ ಅಧ್ಯಕ್ಷ ಫಯಾಝ್, ಕಾರ್ಯದರ್ಶಿ ಹಾರಿಸ್ ಮಂಗಳೂರು, ಕೇರಳ ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಅಲಿ, ಜಿಲ್ಲಾ ಕಾರ್ಯದರ್ಶಿ ಶಾಹುಲ್ , ಉತ್ತರ ರಾಜ್ಯಗಳ ಕಾರ್ಯದರ್ಶಿ ಜಾವೇದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.