ಕವನಗಳು…(ವಿಶ್ವಕನ್ನಡಿಗ ನ್ಯೂಸ್):
ಬೆಳಕು…
ಧ್ಯಾನಿಸುತ್ತಿರವೆ ಇಖ್ಲಾಸಿಲ್ಲದ ಆರಾಧನೆ ಇಬ್ಲಿಸನದ್ದೇ ಮೇಲುಗೈ ನಿಸರ್ಗದೊಳಗೆ ಬೆರೆಯದೆ ದುರ್ಬಲವಾದಲ್ಲಿ ಫಲ?
ಬದುಕು ನಾಲ್ಕು ದಿನದಾಟ ಒಂದು ದಿನ ಆಬಿದಾಗಲು ಹುಚ್ಚು ಆಸೆಗಳಿಲ್ಲದ ಸ್ವಚ್ಚ ಮನಸ್ಸಲ್ಲಿ ಕಂದೀಲು ಹಚ್ಚಿದ ಕತ್ತಲ ಕಾಡಿನಲ್ಲಿ ಮೂರು ದಿನ ತಪಸ್ಸಿರಬೇಕು
ಕೆಲವೊಮ್ಮೆ ಒಳಿತು ಚಿಂತೆಗಳ ಕಡಲಲ್ಲಿ ತೇಲಿ ಬರುವನು ಕೈ ಹಿಡಿದು ದಡ ಸೇರಿಸಬೇಕು ನೀನು ನೀರು ಪಾಲಾದರೆ, ಹಿಂತಿರುಗುವನು ಮತ್ತೆ ಎಲ್ಲಾವು ವ್ಯರ್ಥವಾದಿತು
ಚಿಂತೆಗಳ ಚಿತೆಯಲ್ಲಿ ಬಿದ್ದು ಬೆಂದರೆ, ಸ್ವರ್ಗ ಹೇಗೆ ಸೇರುವುದು? ಬುದ್ದ ಅಗ್ನಿಯಾಗಲಾರನು ಅವನಿಲ್ಲದ ಬದುಕಿಗೆ ಬದ್ದತೆಯೆಲ್ಲಿ
ಮಸಣದಲ್ಲಿ ಉರಿಯುವಾಗ ನರಕದ ಪ್ರೀತಿ, ಸ್ಟರ್ಗ ತಿರಸ್ಕಾರ ಬದುಕೊಂದು ಕಗ್ಗತ್ತಲೆ ಉರ್ದಿ ಕೇಳಿದ ದಿನಕ್ಕೆ ಮರಳಿ ಬೆಳಕು ಕಂಡುಕೊಳ್ಳುವೆನೆಂದರೆ ಫಾಯಿದವಾದರೂ ಏನು ಮತ್ತೆಲ್ಲಿದೆ ಬುದ್ದನಾಗಲು ಅವಕಾಶ…
ಕಾಲಹರಣ ಕಾಲನ ಕಡೆಗಾದರೆ, ಬದುಕೇ ನಿಜ ಬೆಳಕು
-ಆಮಿರ್ ಬನ್ನೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.