ಶಿಕ್ಷಕ ಎಂದರೆ ಕೇವಲ ವೃತ್ತಿ ಯಲ್ಲ ಮುಂದೆ ಗುರಿ ಹಿಂದೆ ಗುರುವಿದ್ದರೆ ಸೋಲಿಲ್ಲ ಅಕ್ಷರ ಕಲಿಸಿ ಜ್ಞಾನಧಾರೆ ಸುರಿಸಿ ತಪ್ಪಾದರೆ ಶಿಕ್ಷಿಸಿ ನೋವಿನಲಿ ಸ್ಪಂದಿಸಿ ಸಾಧನೆಗೆ ಸ್ಫೂರ್ತಿ ನೀಡುತ ಬದುಕಿಗೆ ದಾರಿ ತೋರುವ ಸಾರ್ಥಕ ಜೀವಗಳಿವರೆಲ್ಲ..
ಲೋಕದ ಪರಿವೆಯೇ ಇಲ್ಲದೆ ಯುವಜನತೆಯಿಂದು ಮೆರೆಯುತಿದೆ ಸಮಾನತೆ ಸಾಮರಸ್ಯ ಪದ ಅರ್ಥ ಕಳೆಯುತಿದೆ ಗಾಂಜಾ ಅಮಲಿನಲಿ ತೇಲುತಿದೆ ಕಾಮ ಕ್ರೋಧ ರೋಷದಿ ಮೈಮರೆತಿದೆ
ಭವ್ಯ ಭಾರತದ ಏಳಿಗೆಗೆ ಯುವಸಮೂಹ ಬದಲಾಗಬೇಕು ಶಾಲಾ ಕಾಲೇಜೊಳಗೆ ಧರ್ಮಯುದ್ದ ಕೊನೆಗೊಳ್ಳಬೇಕು ಎಳೆಮನದಲ್ಲಿ ದ್ವೇಷ ಬೆಳೆಸದೆ ಮಾನವೀಯ ಮೌಲ್ಯ ಬಿತ್ತಬೇಕು
ಪುಂಡಾಟಿಕೆಯಿಂದ ಕಳೆಗುಂದದಿರಲಿ ನಮ್ಮ ಮಕ್ಕಳ ಬಾಲ್ಯ ಪ್ರತಿ ಮಕ್ಕಳ ಭವಿಷ್ಯವೂ ಅಮೂಲ್ಯ ಅರಿತು ಬಾಳಲಿ ಜೀವನದ ಮೌಲ್ಯ ಗುರು ಎಂಬ ಎರಡಕ್ಷರದ ಜಾದೂಗಾರನಿಂದ ಇದು ಸಾಧ್ಯ..
✍️ ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.