ಸಕಲೇಶಪುರ(ವಿಶ್ವಕನ್ನಡಿಗ ನ್ಯೂಸ್): ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಠಿ ಮಾಡಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಕೆಲ ನಾಯಕರು, ಸಂಘಟನೆಗಳ ನಡುವೆ ಸದ್ದಿಲ್ಲದೆ ಭಾವೈಕ್ಯತೆ ಸಾರುವ ಜನರು ನಮ್ಮಲ್ಲಿ ಇಂದಿಗೂ ಇದ್ದಾರೆ. ಸೌಹಾರ್ಧತೆಯ ಸಂದೇಶ ಸಾರಿ ಇಡೀ ಸಮಾಜಕ್ಕೆ ಸಕಲೇಶಪುರ ಪುರಭವನ ಗಣೇಶೋತ್ಸವ ಸಮಿತಿ ಸದಸ್ಯರು ಮಾದರಿಯಾಗಿದ್ದಾರೆ.
ಅಷ್ಟಕ್ಕೂ ಇವರು ಸಾರಿದ ಭಾವೈಕ್ಯತೆ ಎಂತಹದ್ದು ಇಲ್ಲಿದೆ ನೋಡಿ.
ಮನಮೋಹಕವಾಗಿ ಪ್ರತಿಷ್ಠಾಪನೆಗೊಂಡಿರೋ ಗಣೇಶ. ಇನ್ನೊಂದೆಡೆ ವಿನಾಯಕನಿಗೆ ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಿರುವ ಹಿಂದೂ ಮುಸ್ಲಿಂ. ಇದಕ್ಕೆಲ್ಲಾ ಕಾರಣವಾಗಿರೋದು ಸಕಲೇಶಪುರ ಸಾರ್ವಜನಿಕ ಗಣೇಶೋತ್ಸವದ ಕಮಿಟಿ ಸದಸ್ಯರು.
ಸಕಲೇಶಪುರ ಪುರಭವನದಲ್ಲಿ ಗಣಪತಿ ಸೇವಾ ಸಮಿತಿ 61ನೇ ಗಣೇಶೋತ್ಸವವನ್ನು ಮುಸ್ಲಿಂ ಸಮುದಾಯದ ಯಾದ್ಗಾರ್ ಗ್ರೂಪ್ ನ ಶ್ರೀ ಅಲಹಾಜ್ ಪಿ.ಎಂ. ಅಹಮದ್ಬಾವ ರವರಿಂದ ಉದ್ಘಾಟಿಸಿದ್ದಾರೆ, ಹಿಂದೂ-ಮುಸ್ಲಿಂ ಒಟ್ಟಿಗೆ ಸೇರಿಕೊಂಡು ಗಣೇಶ ಹಬ್ಬ ಆಚರಿಸಿದ್ದಾರೆ. ಜಾತಿ-ಭೇದಭಾವ ಮರೆತು ಎಲ್ಲರು ಒಂದೆ ಎಂಬ ಭಾವನೆ ಎಲ್ಲರಲ್ಲೂ ಬೆಳೆಯಬೇಕು ಅನ್ನೊ ಸಂದೇಶ ಸಾರಿದ್ದಾರೆ..
ಅದರಲ್ಲೂ…. ದೇವನೊಬ್ಬ ನಾಮ ಹಲವು ಎಂಬ ನಂಬಿಕೆಯಲ್ಲಿ ಇಲ್ಲಿನ ಮುಸ್ಲಿಂ ಬಾಂಧವರು, ಹಿಂದೂಗಳ ಜೊತೆ ಸೇರಿ ವಿಘ್ನ ನಿವಾರಕನನ್ನ ಪ್ರತಿಷ್ಠಾಪನಾಕಾರ್ಯ ಮಾಡಿ.. ಒಟ್ಟಿಗೆ ಹಬ್ಬ ಆಚರಿಸೋ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.
ನಾವೆಲ್ಲರು ಒಂದೇ ,ಮಾನವೀಯತೆ ಎಲ್ಲರಲ್ಲು ಇರಬೇಕು .ಜಾತಿ ಏನ್ನುವುದು ಮನುಷ್ಯ ಮಾಡಿರುವುದು ,ದೇವರ ಮುಂದೆ ಎಲ್ಲರು ಒಂದೇ .
ದೀಪಾವಳಿ ,ಗಣೇಶ ಎಲ್ಲ ಹಬ್ಬವನ್ನು ಹಿಂದು ,ಮುಸ್ಲಿಂ ಭಾಂಧವರು ಒಟ್ಟಾಗಿ ಅಚರಣೆ ಮಾಡುಬೇಕು .ಮಾನವ ಜನ್ಮ ದೊಡ್ಡದು,ಅದನ್ನು ಸಮಾಜದ ಒಳಿತಿಗಾಗಿ ಉಪಯೋಗ ಮಾಡಬೇಕು ಎಂಬುದು ನಮ್ಮೆಲ್ಲರ ಆಶಯವಾಗಬೇಕು.
ಹಲವು ಮುಸ್ಲಿಂ ಬಾಂಧವರು ಗಣೇಶ ಮೂರ್ತಿ ಕೆತ್ತನೆ ಮಾಡುತ್ತಾರೆ… ಮೊಹರಂ ಆಚರಣೆಯಲ್ಲಿ ಮುಸ್ಲಿಂ ಮಹಿಳೆಯರು ಹಿಂದು ಮಹಿಳೆಯರಿಗೆ ಉಡಿ ತುಂಬುತ್ತಾರೆ. ಹಲವು ಕಡೆ ಹಿಂದೂ ಮುಸ್ಲಿಂ ಒಟ್ಟಿಗೆ ದೀಪಾವಳಿ ಹಬ್ಬದಲ್ಲಿ ಭವಾಕ್ಯತೆಯ ದೀಪ ಹಚ್ಚುತ್ತಾರೆ.ಇವೆಲ್ಲಾ ಪ್ರಜಾಪ್ರಭುತ್ವದ ಶ್ರೇಷ್ಠ ನಡೆಗಳು.
ಭಾವೈಕ್ಯತೆ ಮೆರೆದ ವಿನಾಯಕ ಸಮಿತಿ ಅದ್ಯಕ್ಷರು ಪತ್ರಕರ್ತರು ರವಿಕುಮಾರ್, ಉಪಾಧ್ಯಕ್ಷರುಗಳಾದ ಮಳಲಿ ಸ್ವಾಮಿ,ನಂದೀಶ್ ಅರೆಕೆರೆ,ಕಾರ್ಯದರ್ಶಿಗಳಾದ ಎಂ.ಬಿ.ಮಹೇಶ್ ಹಾಗು ಖಜಾಂಚಿ ಎನ್. ಡಿ ರಮೇಶ್. ಎಸ್.ಕೆ ಸೂರ್ಯ, ಬಿ.ಎನ್.ನಾಗೇಶ್, ಎನ್. ಆರ್. ಹಿತೈಷಿ, ಎಂ.ಪಿ.ಜಯನಾಂದ,ಹಾಗು ಕಾರ್ಯಕಾರಿ ಮಂಡಲಿ ಸದಸ್ಯರಿಗೆ ಅಭಿನಂದನೆಗಳು ಎಂದು ಸಂಘಟಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.