(ವಿಶ್ವ ಕನ್ನಡಿಗ ನ್ಯೂಸ್) : ಕುಟುಂಬದಲ್ಲಿ ಪಾವತಿಸಲು ಹಣವಿಲ್ಲದ ಕಾರಣ ಗರ್ಭಿಣಿ ಮಹಿಳೆಯನ್ನು ಆಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟು ಹೋದ ಘಟನೆ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದಿದೆ.
ವೀಡಿಯೊದಲ್ಲಿ, ಗರ್ಭಿಣಿ ಮಹಿಳೆಯೊಬ್ಬರು ರಸ್ತೆಯ ಮೇಲೆ ಕುಳಿತಿರುವುದನ್ನು ಅವರ ಕುಟುಂಬ ಸದಸ್ಯರು ಸಹಾಯ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವರದಿಗಳ ಪ್ರಕಾರ, ಗರ್ಭಿಣಿ ಮಹಿಳೆಯ ಕುಟುಂಬದ ಕೈಯಲ್ಲಿ ಚಾಲಕನಿಗೆ ನೀಡಲು 1000 ರೂ ಕೂಡ ಇರಲಿಲ್ಲ, ಹೀಗಾಗಿ ಆಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲೇ ಬಿಟ್ಟಿದ್ದಾನೆ.
1000 ರೂ ನೀಡಿದರೆ ಚಾಲಕ ಗರ್ಭಿಣಿಯನ್ನು ಆಸ್ಪತ್ರೆಗೆ ಡ್ರಾಪ್ ಮಾಡುತ್ತಿದ್ದ ಎಂದು ಗರ್ಭಿಣಿ ಮಹಿಳೆಯ ಸಂಬಂಧಿಯೊಬ್ಬರು ಹೇಳಿದರು, ಆದರೆ, ಕುಟುಂಬದ ಬಳಿ ಹಣವಿಲ್ಲದ ಕಾರಣ ಚಾಲಕ ಅವರನ್ನು ರಸ್ತೆಯ ಮಧ್ಯದಲ್ಲಿ ಇಳಿಸಿದರು. ಗರ್ಭಿಣಿ ಮಹಿಳೆ ಕೆಲವು ಗಂಟೆಗಳ ಕಾಲ ರಸ್ತೆಯ ಮೇಲೆ ಕುಳಿತಿದ್ದಳು ಎಂದು ವರದಿಗಳು ಹೇಳಿವೆ.
ವಿಡಿಯೋ ನೋಡಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.