(www.vknews.in) ಮಾಣಿ: ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ಎಳೆಯದರಲ್ಲೇ ಕಲಿಸಿ ಗುರು, ಹಿರಿಯರು, ಧರ್ಮ ,ದೇವರ ಬಗ್ಗೆ ಗೌರವ ಮೂಡಿಸಿ ಸತ್ಪ್ರಜೆಗಳಾಗಿ ರೂಪಿಸುವುದೇ ಮದ್ರಸಗಳ ಉದ್ದೇಶ.
ಶಾಂತಿ ಮತ್ತು ಭಾತೃತ್ವ,ಸಮಾನತೆಯ ಸಂದೇಶಗಳನ್ನೇ ಇಲ್ಲಿ ಮುಖ್ಯವಾಗಿ ಕಲಿಸಲಾಗುತ್ತೆ. ದೇಶ ಮತ್ತು ಸಮಾಜದೊಂದಿಗೆ ಪ್ರಜೆಗಳಿಗಿರುವ ಸಾಮಾಜಿಕ ಜವಾಬ್ದಾರಿಯನ್ನು ಮದ್ರಸಗಳಲ್ಲಿ ನೆನಪಿಸಲಾಗುತ್ತೆ. ಇಂತಹ ಪವಿತ್ರ ಕೇಂದ್ರಗಳನ್ನು ಅಪ ಪ್ರಚಾರದ ಮೂಲಕ ಇತರ ಧರ್ಮೀಯರು ಸಂಶಯ ಪಡುವಂತೆ ಮಾಡುವ ಕುತ್ಸಿತ ಶ್ರಮಗಳು ನಡೆಯುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳು ಎಚ್ಚೆತ್ತು ಕೊಂಡು ಇಂತಹ ಅಪ ಪ್ರಚಾರಗಳನ್ನು ನೀಗಿಸುವ ಸಲುವಾಗಿ ಉಪಕ್ರಮಗಳನ್ನು ಅಳವಡಿಸಿ ಕೊಳ್ಳಲು ಮುಂದೆ ಬರಬೇಕೆಂದು ಜಂಇಯತುಲ್ ಖುತಬಾ ಜಿಲ್ಲಾ ಸಮಿತಿ ಕರೆ ನೀಡಿದೆ. ನೇರಳಕಟ್ಟೆ ಸಮಸ್ತ ಮಹಲ್ ನಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಯಿತು. ಮಾದಕ ದ್ರವ್ಯಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ದ ಮೊಹಲ್ಲಾಗಳನ್ನು ಕೇಂದ್ರೀಕರಿಸಿ ತ್ರೈಮಾಸಿಕ ಜಾಗೃತಿ ಆಂದೋಲನ ನಡೆಸಲು ತೀರ್ಮಾನಿಸಲಾಯಿತು. ಜಿಲ್ಲಾದ್ಯಕ್ಷ ಎಸ್ ಬಿ ದಾರಿಮಿ ಉಪ್ಪಿನಂಗಡಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯನ್ನು ಕಡಬ ಇಬ್ರಾಹಿಂ ದಾರಿಮಿ ಉದ್ಗಾಟಿಸಿದರು. ಸಂಪ್ಯ ಹಮೀದ್ ದಾರಿಮಿ ದುಆಗೈದರು. ಕಾರ್ಯದರ್ಶಿ ರಶೀದ್ ರಹ್ಮಾನಿ ಸ್ವಾಗತಿಸಿದರು.ರಶೀದ್ ಯಮಾನಿ ವಂದಿಸಿದರು.ಅಬ್ಬಾಸ್ ದಾರಿಮಿ ಕೆಲಿಂಜ, ರಿಯಾಝ್ ರಹ್ಮಾನಿ, ತಾಜುದ್ದೀನ್ ರಹ್ಮಾನಿ, ಶಂಸುದ್ದೀನ್ ದಾರಿಮಿ, ನಝೀರ್ ಅಝ್ಹರಿ,ಶಂಸುಧ್ಧೀನ್ ಅಶ್ರಫಿ, ಇಬ್ರಾಹಿಂ ಮುಸ್ಲಿಯಾರ್ ಸಿ. ಎಚ್. ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.