ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದರೂ ಸಾಗುವಳಿ ಚೀಟಿ ಸಿಗದೇ ಪರಿತಪಿಸುತ್ತಿದ್ದ ಕೋಲಾರ ತಾಲ್ಲೂಕಿನ ತಲಗುಂದ ಪುರಹಳ್ಳಿಯ ರೈತ ವೆಂಕಟರಾಮಪ್ಪ ಅವರಿಗೆ ಖುದ್ದು ತಹಸೀಲ್ದಾರ್ ನಾಗರಾಜ್ ಭೇಟಿ ನೀಡಿ ಸ್ಥಳದಲ್ಲೇ ಅವರಿಗೆ ಭೂ ಮಂಜೂರಾತಿ ಪತ್ರ ವಿತರಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ.
ತಾಲ್ಲೂಕಿನ ಸುಗಟೂರು ಹೋಬಳಿ ತಲಗುಂದ ಪುರಹಳ್ಳಿ ಗ್ರಾಮದ ನಿವಾಸಿ ಕಡು ಬಡ ಕುಟುಂಬದ ವೆಂಕಟರಾಮಪ್ಪ ಅವರು ಗ್ರಾಮದ ಸರ್ವೇ ನಂ .೩೪ ರ ಜಮೀನಿನಲ್ಲಿ ಸುಮಾರು ೭೫ ವರ್ಷಗಳಿಂದ ಸ್ವಾಧೀನದಲ್ಲಿದ್ದು , ಕಳೆದ ೨೦೦೩ ರಲ್ಲೇ ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೆನ್ನಲಾಗಿದೆ.
ಸಾಗುವಳಿ ಚೀಟಿಗಾಗಿ ಎಷ್ಟೇ ಅಲೆದಾಡಿದರೂ ಪ್ರಯೋಜನವಾಗದಿದ್ದಾಗ ಮನನೊಂದ ವೆಂಕಟರಾಮಪ್ಪ ಸಾಗುವಳಿ ಚೀಟಿ ಸಿಗುತ್ತದೆ ಎಂಬ ವಿಶ್ವಾಸವನ್ನೇ ಕಳೆದುಕೊಂಡು ಸದರಿ ಜಮೀನಿನಲ್ಲಿ ಕೃಷಿಮಾಡಿಕೊಂಡಿದ್ದರು.
ಈ ಸಂಬಂಧ ಸಾಗುವಳಿ ನೀಡುವಲ್ಲಿ ತಾಲ್ಲೂಕು ಕಚೇರಿಯಿಂದ ವಿಳಂಬವಾಗಿರುವ ಕುರಿತು ಮಾಹಿತಿ ಸಿಕ್ಕ ಕೂಡಲೇ ಕಾರ್ಯೋನ್ಮುಖರಾದ ತಹಸೀಲ್ದಾರ್ ನಾಗರಾಜ್ ತಾವೇ ಸ್ವತಃ ಕಡತ ತೆಗೆಸಿ ಸಾಗುವಳಿ ಚೀಟಿ ಸಿದ್ಧಪಡಿಸಿಕೊಂಡು ಖುದ್ದು ಪುರಹಳ್ಳಿ ಗ್ರಾಮಕ್ಕೆ ತೆರಳಿ ರೈತ ವೆಂಕಟರಾಮಪ್ಪ ಅವರ ಮನೆಯಲ್ಲೇ ಸಾಗುವಳಿ ಚೀಟಿ ನೀಡುವ ಮೂಲಕ ಮಾನವೀಯತೆ ಮೆರೆದರು.
ಎಷ್ಟೇ ಅಲೆದಾಡಿದರೂ ಜಮೀನಿನ ಸಾಗುವಳಿ ಚೀಟಿ ಸಿಗದೇ ನೋಂದಿದ್ದ ಕುಟುಂಬ ಸಂತೋಷದಲ್ಲಿ ತೇಲುವಂತಾಗಿದ್ದು , ಅವರ ಕುಟುಂಬದವರು ಹಾಗೂ ಗ್ರಾಮಸ್ಥರು ತಹಸೀಲ್ದಾರ್ ಅವರ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.