ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕೆಲವು ಕಾರ್ಯವಿಧಾನಗಳನ್ನು ತರುತ್ತಿದೆ. ಆದರೆ, ಖಾತೆಗಳ ಅಮಾನತು ಸೇರಿದಂತೆ ಪ್ರಸ್ತುತ ಪ್ರಕರಣಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಟ್ವಿಟರ್ ಸೇರಿದಂತೆ ಸಾಮಾಜಿಕ ಮಾಧ್ಯಮ ಖಾತೆಗಳ ಅಮಾನತು ವಿರುದ್ಧದ ಅರ್ಜಿಗಳ ಗುಂಪನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಪರಿಗಣಿಸುತ್ತಿರುವಾಗ ಕೇಂದ್ರ ಸರ್ಕಾರ ಇದನ್ನು ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರದ ಪರ ವಕೀಲ ಕೀರ್ತಿಮಾನ್ ಸಿಂಗ್ ವಾದ ಮಂಡಿಸಿದ್ದರು.
”ನಾವು ನ್ಯಾಯಾಲಯದ ಆದೇಶದಂತೆ ಪರಿಶೀಲಿಸಿದ್ದೇವೆ. ತಿದ್ದುಪಡಿ ತರಲಾಗುವುದು, ಆದರೆ ಅದು ಯಾವಾಗ ಎಂದು ಹೇಳಲು ಸಾಧ್ಯವಿಲ್ಲ. ಇದು ಮುಂಬರುವ ವಿಷಯಗಳಲ್ಲಿ ಬದಲಾವಣೆಯಾಗಲಿದೆ. ಈಗಿರುವ ಪ್ರಕರಣಗಳ ಮೇಲೆ ಪರಿಣಾಮ ಬೀರುವುದಿಲ್ಲ, ಅಸ್ತಿತ್ವದಲ್ಲಿರುವ ಪ್ರಕರಣಗಳು ಈಗಿರುವ ಕಾನೂನಿನ ವ್ಯಾಪ್ತಿಗೆ ಬರುತ್ತವೆ ಎಂದು ಕೇಂದ್ರ ಸರ್ಕಾರದ ವಕೀಲರು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.