ದುಬೈ ಹೆಮ್ಮೆಯ ಯುಎಇ ಕನ್ನಡಿಗರು ಮತ್ತು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ..
ಅಬುಧಾಬಿ (www.vknews.in) : ಕರ್ನಾಟಕದಿಂದ ಕೆಲಸ ಹುಡುಕಿಕೊಂಡು ಬಂದ ಮತ್ತು ಇರುವ ಕೆಲಸ ಬದಲಾವಣೆ ಮಾಡಲು ಇಚ್ಛಿಸುವ ಕೆಲಸ ಹುಡುಕುವ ಅನಿವಾಸಿ ಕನ್ನಡಿಗರಿಗಾಗಿ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಜಾಬ್ ಹೆಲ್ಪಿಂಗ್ ವಿಂಗ್ ಮತ್ತು ಕೊಡಗು ಹಳೆ ವಿದ್ಯಾರ್ಥಿಗಳ ಸಂಘ, ದುಬೈ ಯುಎಇ ಇದರ ಜಂಟಿ ಆಶ್ರಯದಲ್ಲಿ ಇದೇ ಶನಿವಾರ ಸಪ್ಟೆಂಬರ್ 17ರಂದು ಮದ್ಯಾಹ್ನ 12ರಿಂದ 3ಗಂಟೆವರೆಗೆ ಅಲ್ ಕಿಸಸ್ ನಲ್ಲಿರುವ ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ಸಭಾಂಗಣದಲ್ಲಿ ನಮ್ಮವರಿಗೆ ಉದ್ಯೋಗಕ್ಕೆ ಸಹಾಯ ಎಂಬ ಆಶಯದೊಂದಿಗೆ ಉದ್ಯೋಗ ಸಂದರ್ಶನ ಕೌಶಲ್ಯ ಕಾರ್ಯಾಗಾರ ಮತ್ತು ಉದ್ಯೋಗ ಸಂಪರ್ಕ ಮೇಳ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಉದ್ಯೋಗ ಸಂದರ್ಶನ ಕೌಶಲ್ಯ ಕಾರ್ಯಾಗಾರದಲ್ಲಿ ಮಾಸ್ಟರ್ ಉಮರ್ ಫಾರೂಕ್, ಶ್ರೀಮತಿ ರಾಜೇಶ್ವರಿ, ಶ್ರೀಯುತ ಅಬ್ಬಾಸ್ ಮತ್ತು ಶ್ರೀಯುತ ಆಲ್ವಿನ್ ಪಿಂಟೋ ಮುಂತಾದ ನುರಿತ ವ್ಯಕ್ತಿಗಳಿಂದ ಜಾಬ್ ಮತ್ತು ಕೆರೀರ್ ಗೈಡೆನ್ಸ್ ನೀಡಲಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಓವಿಲಾ ಫರ್ನಾಂಡಿಸ್ ಅವರು ಆಗಮಿಸಲಿದ್ದಾರೆ.
ಉದ್ಯೋಗ ಸಂಪರ್ಕ ಕಾರ್ಯಾಗಾರದಲ್ಲಿ ಕನ್ನಡಿಗರು ಮತ್ತು ಕನ್ನಡೇತರ ವ್ಯಾಪಾರಸ್ಥರು, ಕಂಪನಿಗಳ ಎಚ್ ಆರ್ ಮುಂತಾದವರನ್ನು ಆಹ್ವಾನಿಸಲಾಗಿದ್ದು ಕೆಲಸ ಹುಡುಕುವ ಸೂಕ್ತ ಅಭ್ಯರ್ಥಿಗಳಿಗನ್ನು ಭೇಟಿಯಾಗಲು ಮತ್ತು ಸಿವಿ ಪಡೆಯಲು ಸ್ಥಳವಕಾಶ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.