ಪೋರ್ಟ್ಫೋಲಿಯೋ ವಿಸ್ತರಿಸಿದ ನೆಸ್ಲೆ ಸೆರೆಗ್ರೋ (CEREGROW™); ಸಾಂಪ್ರದಾಯಿಕ ಸಾಮಗ್ರಿಗಳ ಪ್ರೇರಣೆಯಿಂದ ಸೆರೆಗ್ರೋ ಗ್ರೈನ್ ಸೆಲೆಕ್ಷನ್ (CEREGROW™ Grain SelectionTM) ಬಿಡುಗಡೆ
(www.vknews.in): ಆಹಾರದ ಶಕ್ತಿಯನ್ನು ಅನಾವರಣಗೊಳಿಸುವ ಮೂಲಕ ಆವಿಷ್ಕಾರ ಕೈಗೊಳ್ಳುವ ನೆಸ್ಲೆ ಇಂಡಿಯಾದ ಬದ್ಧತೆಗೆ ಅನುಗುಣವಾಗಿ, ನೆಸ್ಲೆ ಸೆರೆಗ್ರೊ(CEREGROW™), ಹೊಸ ಉಪ ಬ್ರ್ಯಾಂಡ್ CEREGROW™ Grain SelectionTMನ ಪರಿಚಯದೊಂದಿಗೆ ತನ್ನ ಪೋರ್ಟ್ಫೋಲಿಯೋ ವಿಸ್ತರಿಸಿಕೊಂಡಿದೆ. ಸಾಂಪ್ರದಾಯಿಕ ಸಾಮಗ್ರಿಗಳಿಂದ ಪ್ರೇರಣೆಗೊಂಡು, ಈ ಶ್ರೇಣಿಯಲ್ಲಿ ಪರಿಚಯಿಸಲಾಗುತ್ತಿರುವ 1ನೆ ಉತ್ಪನ್ನವು ರಾಗಿ, ಮಿಶ್ರ ಹಣ್ಣುಗಳು ಮತ್ತು ತುಪ್ಪದಿಂದ ತಯಾರಿಸಲ್ಪಟ್ಟಿದ್ದು ಎಳೆಯ ಮಕ್ಕಳಿಗೆ ಪೌಷ್ಟಿಕವಾದ ಧಾನ್ಯವಾಗಿದೆ.
ಪರಿಚಯದ ಬಗ್ಗೆ ಮಾತನಾಡುತ್ತಾ, ನೆಸ್ಲೆ ಇಂಡಿಯಾದ ನ್ಯೂಟ್ರಿಶನ್ ಬಿಜಿನೆಸ್ ವಿಭಾಗದ ಮುಖ್ಯಸ್ಥ ವಿನೀತ್ ಸಿಂಗ್, “ಸಾಂಕ್ರಾಮಿಕದ ಬಳಿಕ ಪೋಷಕರು, ಖಾತರಿಯಾದ ಪೋಷಣೆಯ ಆತ್ಮವಿಶ್ವಾಸ ಜೊತೆಗೆ, ತಮ್ಮ ಮಕ್ಕಳ ಆಹಾರಕ್ರಮದಲ್ಲಿ ಸಾಂಪ್ರದಾಯಿಕ ಸಾಮಗ್ರಿಗಳು ಮತ್ತು ರೆಸಿಪಿಗಳನ್ನು ಸಂಯೋಜಿಸುವ ವಿಧಾನಗಳನ್ನು ಹೆಚ್ಚು ಹೆಚ್ಚು ಪರಿಶೀಲಿಸುತ್ತಿದ್ದಾರೆ. ಹಣ್ಣು ಮತ್ತು ಹಾಲಿನಿಂದ ಕೂಡಿರುವ ನೆಸ್ಲೆ CEREGROW™ ಮಲ್ಟಿಗ್ರೈನ್ ಸೀರಿಯಲ್ “ಪೂರ್ಣ ಪೋಷಣೆ, ಪೂರ್ಣ ಖಾತರಿ(ಪೂರಾ ಪೋಷಣ್, ಪೂರೀ ತಸಲ್ಲೀ)ದ ಭರವಸೆಯೊಂದಿಗೆ, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವ ನಮ್ಮ ಅತ್ಯಂತ ಯಶಸ್ವೀ ಪರಿಚಯಗಳ ಪೈಕಿ ಒಂದಾಗಿದೆ. ರಾಗಿ, ಮಿಶ್ರ ಹಣ್ಣುಗಳು ಮತ್ತು ತುಪ್ಪದಿಂದ ತಯಾರಿಸಲ್ಪಟ್ಟಿರುವ ಹೊಚ್ಚ ಹೊಸ CEREGROW™ Grain SelectionTM, ತಾಯಂದಿರು ತಮ್ಮ ಮಕ್ಕಳ ಆಹಾರದಲ್ಲಿ ಪೌಷ್ಟಿಕವಾದ ಮತ್ತು ರುಚಿಕರವಾದ ಸಾಂಪ್ರದಾಯಿಕ ಸಾಮಗ್ರಿಗಳನ್ನು ಅಳವಡಿಸಿಕೊಳ್ಳುವುದಕ್ಕೆ ನೆರವಾಗಲಿದೆ”ಎಂದು ಹೆಳಿದರು.
ಭಾರತದಲ್ಲಿ, ಸಿರಿಧಾನ್ಯಗಳು ಆಹಾರಬುತ್ತಿಯ ಅವಿಭಾಜ್ಯ ಅಂಶವಾಗಿದ್ದು, CEREGROW™ Grain SelectionTM, ಈ ಸಾಂಪ್ರದಾಯಿಕ ಸಿರಿಧಾನ್ಯಗಳ ಮೌಲ್ಯದ ಪರಿಶೋಧನೆಯ ಗೀತವಾಗಿದೆ. ರಾಗಿ, ಮಿಶ್ರ ಹಣ್ಣುಗಳು ಮತ್ತು ತುಪ್ಪದಿಂದ ತಯಾರಿಸಲ್ಪಟ್ಟಿರುವ ಹೊಚ್ಚ ಹೊಸ CEREGROW™ Grain SelectionTM, ಭಾರತದ ಎಲ್ಲಾ ಪ್ರಮುಖ ರೀಟೇಲ್ ಮತ್ತು ಆನ್ಲೈನ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಪೌಷ್ಟಿಕಾಂಶ-ಸಮೃದ್ಧವಾದ ಸಿರಿಧಾನ್ಯಗಳನ್ನು ಗೌರವಿಸಲು ಹಾಗೂ ಜನಜಾಗೃತಿಯನ್ನು ಹೆಚ್ಚಿಸಲು, 2023 ಇಸವಿಯನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದೆ. 4000ಕ್ಕಿಂತ ಹೆಚ್ಚಿನ ವರ್ಷಗಳಿಂದ ಬೆಳೆಯಲ್ಪಡುತ್ತಿರುವ ರಾಗಿಯನ್ನು(ಇದನ್ನು ನಚ್ನಿ, ಮಂಡುವಾ, ಕೆಪ್ಪೈ ಎಂದೂ ಕರೆಯಲಾಗುತ್ತದೆ) ಬೆಳೆಯುವುದಕ್ಕೆ ಅತ್ಯಲ್ಪ ನೀರು ಸಾಕು ಮತ್ತು ದೀರ್ಘಾವಧಿ ಕೃಷಿಗೂ ಇದು ಉತ್ತಮವಾದುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.