ಜಿಇ ಅವರ ಜಾನ್ ಎಫ್ ವೆಲ್ಚ್ ತಂತ್ರಜ್ಞಾನ ಕೇಂದ್ರವು ಭಾರತದಲ್ಲಿ 22 ವರ್ಷಗಳನ್ನು ಬೆಂಗಳೂರಿನಲ್ಲಿ ಪೂರೈಸಿದೆ.
ಬೆಂಗಳೂರು (www.vknews.in): ವಿನೂತನತೆಯನ್ನು ಬೆಂಬಲಿಸುವ ಅನನ್ಯವಾದ ಬಹು ಆಯಾಮಗಳ ಪರಿಸರ ವ್ಯವಸ್ಥೆಯೊಂದಿಗೆ ಜಿಇ ಅವರ ಜಾನ್ ಎಫ್ ವೆಲ್ಚ್ ತಂತ್ರಜ್ಞಾನ ಕೇಂದ್ರವು ಭಾರತದಲ್ಲಿ 22 ವರ್ಷಗಳನ್ನು ಬೆಂಗಳೂರಿನಲ್ಲಿ ಪೂರೈಸಿದೆ.
ಆರಂಭಿಕ $ 220 ಮಿಲಿಯನ್ ಹೂಡಿಕೆಯೊಂದಿಗೆ 50 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಜಿ ಇ ಇನ್ವೆಸ್ಟ್ಮೆಂಟ್, ಜಾಗತಿಕ ಸಂಶೋಧನಾ ಕೇಂದ್ರವಾಗಿ ವಿದ್ಯುಚ್ಛಕ್ತಿ, ಆರೋಗ್ಯಶುಷ್ರೂಷೆ ಹಾಗೂ ವಿಮಾನಯಾನಗಳ ಜಿ ಇ ಅವರ ಮೂರು ವ್ಯಾಪಾರ ಕ್ಷೇತ್ರಗಳನ್ನು ಬೆಂಬಲಿಸುತ್ತದೆ. ಸಂಶೋಧನೆ ಹಾಗೂ ಅಭಿವೃದ್ಧಿಗಳ ಮೇಲೆ ಗಮನಾರ್ಹ ಹೂಡಿಕೆಯೊಂದಿಗೆ ಜಿ ಇ ಸಂಶೋಧನಾ ಕೇಂದ್ರವು ಭಾರತದಲ್ಲಿ ಮುಂದಿನ ಪೀಳಿಗೆಂತಂತ್ರಜ್ಞಾನವನ್ನು ಸೃಷ್ಟಿಸಲು ಸರ್ಕಾರಿ ಹಾಗೂ ಶೈಕ್ಷಣ ಸಂಸ್ಥೆಗಳೊಂದಿಗೆ ಕಾರ್ಯತಾಂತ್ರಿಕ ಪಾಲುದಾರಿಕೆ ಹೊಂದಿದೆ.
ಈ ಮೈಲಿಗಲ್ಲನ್ನು ಸಾಧಿಸಿದ ಸಂದರ್ಭದಲ್ಲಿ ಮಾತನಾಡುತ್ತ, ಜಿ ಇ ಇಂಡಿಯಾ ತಂತ್ರಜ್ಞಾನ ಕೇಂದ್ರದ ಸಿ ಇ ಓ ಹಾಗೂ ಜಿ ಇ ದಕ್ಷಿಣ ಏಷ್ಯಾದ ಸಿ ಟಿ ಓ ಅಲೋಕ್ ನಂದ, “ ಜಿ ಇ ನಲ್ಲಿ ವಿನೂತನ ಪ್ರಯೋಗಗ ¼ ನಮ್ಮ ಸಂಶೋಧನೆಯ ಕೇಂದ್ರವಾಗಿದ್ದು, ನಾವು ಸೇವೆ ಒದಗಿಸುವ ಪ್ರತಿಯೊಂದು ಉದ್ದಿಮೆಯಲ್ಲಿ ಪ್ರಭಾವ ಬೀರುತ್ತದೆ. ಬೆಂಗಳೂರಿನ JFWTC ನ ನಮ್ಮ 22 ವರ್ಷಗಳ ಪಯಣ ನಮ್ಮ ಸಂಶೋಧನೆ ಹಾಗೂ ಉದ್ದಿಮೆಗಳೊಂದಿಗಿನ ಸಹಯೋಗದ ಗುಣಮಟ್ಟದ ಪುರಾವೆಯಾಗಿದೆ. ಭವಿಷ್ಯದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾವು ಇನ್ನೂ ಹೆಚ್ಚು ಕಟ್ಟುನಿಟ್ಟಿನ ಸಂಶೋಧನೆಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತೇವೆ “ ಎಂದರು.
ಭಾರತದಲ್ಲಿ ಪ್ರಪ್ರಥಮ 5G ವಿನೂತನ ಪ್ರಯೋಗಾಲಯದ ಆರಂಭವನ್ನು ಜಿ ಇ ಹೆಲ್ತ್ಕೇರ್ ಇತ್ತೀಚೆಗೆ ಪ್ರಕಟಿಸಿತು. ಈ ಪ್ರಯೋಗಾಲಯವ JFWTC ನಲ್ಲಿ ಸ್ಥಾಪಿಸಲಾಗಿದೆ. ಈ ವಿನೂತನ ಪ್ರಯೋಗಾಲಯವು, ಆರೋಗ್ಯ ಶುಷ್ರೂಷೆ ಕ್ಷೇತ್ರದಲ್ಲಿ ಭವಿಷ್ಯ-ಸಿದ್ಧ ಉತ್ಪನ್ನಗಳನ್ನು ಹಾಗೂ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪರೀಕ್ಷಾ ಕೇಂದ್ರವಾಗಿ ಕೆಲಸ ಮಾಡುತ್ತದೆ. ಈ ಪ್ರಯೋಗಾಲಯದಲ್ಲಿ ಆಧುನಿಕ ಹಾಗೂ ವಿನೂತನವಾದ ಮೂಲಭೂತಸೌಕರ್ಯ ಸೇರಿದಂತೆ ಪರೀಕ್ಷೆ ಹಾಗೂ ಅಭಿವೃದ್ಧಿಗೆ ಖಾಸಗಿ 5G ನೆಟ್ವರ್ಕ್ ಒಳಗೊಂಡಿರುತ್ತದೆ.
ಅಮೆರಿಕದ ಹೊರಗೆ JFWTC ಜಿ ಇ ಅವರ ಅತಿ ದೊಡ್ಡ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಿದ್ದು, 6000 ಕ್ಕೂ ಹೆಚುಅರ್ಹ ಇಂಜಿನಿಯರ್ ಗಳು ಹಾಗೂ ವಿಜ್ಞಾನಿಗಳನ್ನು ಹೊಂದಿದೆ. 2000 ದಲ್ಲಿ ಉದ್ಘಾಟನೆಯಾದಾಗಿನಿಂದ JFWTC ತಂಡಗಳು ಜಿ ಇ ಹೊರತಂದ 3800+ ಪೇಟೇಂಟ್ ಅಪ್ಲಿಕೇಷನ್ಗಳಿಗೆ ಕಾರಣೀಭೂತರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.